ಮಂಗಳೂರು: ಭಾರತದ ಎಪ್ಪತ್ತೆರಡನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ವಲಯ ಮಟ್ಟದಲ್ಲಿ ಆಗಸ್ಟ್ ಒಂದರಿಂದ ಹದಿನೈದರ ತನಕ ನಡೆಸಲಿರುವ “ಪ್ರಜಾ ಸಂಗಮ” ಕಾರ್ಯಕ್ರಮದ ರಾಜ್ಯ ಮಟ್ಟದ ಚಾಲನಾ ಸಮಾವೇಶವು ಆಗಸ್ಟ್ ಒಂದರಂದು ಬುದವಾರ ಸಂಜೆ ನಾಲ್ಕು ಗಂಟೆಗೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನ “ಸ್ಪರ್ಶ ಸಭಾಂಗಣ” ದಲ್ಲಿ ನಡೆಯಲಿದೆ.
ಇದು “ಭಾರತ ಭಾರತೀಯರದ್ದಾಗಲಿ” ಎಂಬ ಸಂದೇಶ ದೊಂದಿಗೆ ಎಲ್ಲಾ ವಲಯ ಕೇಂದ್ರ ಗಳಲ್ಲಿ ನಡೆಯಲಿರುವ ಸಮಾವೇಶ ಗಳ ರಾಜ್ಯ ಮಟ್ಟದ ಉದ್ಘಾಟನಾ ಸಮಾವೇಶ ವಾಗಿದ್ದು ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಲಿರುವರು.ಮಾಜಿ ಸಚಿವ ಶ್ರೀ ಬಿ.ರಮಾನಾಥ ರೈ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಮುಖ್ಯ ಅತಿಥಿಗಳಾಗಿರುವರು
ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಸಂದೇಶ ವಿಶದೀಕರಣ ಭಾಷಣ ಮಾಡಲಿದ್ದು ರಾಜ್ಯಾಧ್ಯಕ್ಷ ಜಿ.ಎಂ.ಎಂ ಕಾಮಿಲ್ ಸಖಾಫಿ ಅಧ್ಯಕ್ಷ ತೆ ವಹಿಸುವರು.
ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ, ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಮೀದ್ ಪಿ.ಎಂ.ಎಚ್. ಈಶ್ವರಮಂಗಲ, ಎಸ್. ಎಸ್.ಎಫ್.ರಾಜ್ಯ ಕಾರ್ಯದರ್ಶಿ ಹಾಫಿಲ್ ಸುಫ್ಯಾನ್ ಸಖಾಫಿ ಕಾವಲಕಟ್ಟೆ, ಎಸ್.ಇ.ಡಿ.ಸಿ.ರಾಜ್ಯಾಧ್ಯಕ್ಷ ಕೆಕೆಎಂ ಕಾಮಿಲ್ ವಿಶೇಷ ಆಹ್ವಾನಿತರಾಗಿರುವರು.
ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ನಾಯಕರು, ಜಿಲ್ಲಾ ಸಮಿತಿಯ ಮುಖಂಡರು , ವಿವಿಧ ವಲಯ ಸಮಿತಿಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ಸಾಮಾಜಿಕ, ರಾಜಕೀಯ ರಂಗದ ಪ್ರಮುಖರು ಭಾಗವಹಿಸಲಿರುವರು.
ಮುಂದೆ ರಾಜ್ಯದ ವಿವಿಧ ಸೆಂಟರ್ ಸಮಿತಿಗಳ ಉಸ್ತುವಾರಿಯಲ್ಲಿ ಸ್ಥಳೀಯ ಎಲ್ಲಾ ಮತ-ಧರ್ಮ-ವರ್ಗ ದ ಜನರನ್ನು ಸೇರಿಸಿ ಸೆಂಟರ್ ಮಟ್ಟದಲ್ಲಿ ಪ್ರಜಾ ಸಂಗಮಗಳು ನಡೆಯಲಿದ್ದು ಕಾರ್ಯಕ್ರಮ ದ ಘೋಷವಾಕ್ಯವಾದ ” ಭಾರತ ಭಾರತೀಯರದ್ದಾಗಲಿ” ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ಚರ್ಚೆ ಗಳು ನಡೆಯಲಿರುವುದು ಎಂದು ಎಸ್.ವೈ.ಎಸ್. ಪ್ರಕಟಣೆಯಲ್ಲಿ ತಿಳಿಸಿದೆ.