janadhvani

Kannada Online News Paper

ಫ್ಯಾಮಿಲಿ ವಿಸಿಟ್ ವೀಸಾ ಪ್ರಕ್ರಿಯೆ ಆನ್ ಲೈನ್ ನಲ್ಲಿ ಮಾತ್ರ-ಖತಾರ್

ದೋಹಾ: ಕತರ್‌ನಲ್ಲಿರುವ ಅನಿವಾಸಿಗಳಿಗೆ ತಮ್ಮ ಕುಟುಂಬವನ್ನು ಕರೆತರಲು ಬೇಕಾದ ಸಂದರ್ಶನ ವೀಸಾವನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಆನ್ ಲೈನ್ ‌ಗೊಳಿಸಲಾಗುವುದು.
ಫ್ಯಾಮಿಲಿ ವಿಸಾಗೆ ಮೆಟ್ರಾಷ್ 2 ಮೊಬೈಲ್ ಆ್ಯಪ್ ಮೂಲಕ ಅಥವಾ ಆಂತರಿಕ ಸಚಿವಾಲಯದ ವೆಬ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ.

ಅದೇ ರೀತಿ ಸರ್ವೀಸ್ ಕೇಂದ್ರಗಳಲ್ಲಿ ಕೂಡಾ ಅಪೇಕ್ಷೆಗಳನ್ನು ಸ್ವೀಕರಿಸಲಾಗುತ್ತದೆ. ಆದರೆ, ಅದು ಪೂರ್ಣವಾಗಿಯೂ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗೆ ಶೀಘ್ರದಲ್ಲೇ ಮಾರ್ಪಾಟು ಆಗಲಿದೆ ಎಂದು ಜನರಲ್ ಡೈರೆಕ್ಟರೇಟ್ ಆಫ್ ಪಾಸ್‌ಪೋರ್ಟ್‌ನ ಪ್ರವಾಸಿ ವಿಭಾಗದ ಡೈರೆಕ್ಟರ್ ಬ್ರಿಗೇಡಿಯರ್ ಅಬ್ದುಲ್ಲಾ ಅಲಿ ಅಲ್ ಮುಹನ್ನದಿ ಹೇಳಿದರು.

ಖತರ್‌ನ ರಾಷ್ಟ್ರೀಯ ದೃಷ್ಟಿ ರೇಖೆಯ 2030ರ ಆಧಾರದಲ್ಲಿ ಸೇವೆಗಳು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಆನ್ ಲೈನ್ ಮೂಲಕ ಲಭ್ಯವಾಗುವ ವಿಧಾನಕ್ಕೆ ಕುಟುಂಬ ಭೇಟಿ ವೀಸಾ ಅರ್ಜಿಗಳನ್ನು ಕೂಡ ವಿದ್ಯುನ್ಮಾನ ರೀತಿಗೆ ಬದಲಾಯಿಸಲಾಗುತ್ತಿದೆ.

ಇ-ಅಪ್ಲಿಕೇಶನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ ಲೈನ್ ನಲ್ಲಿ ಅಗತ್ಯವಾದ ದಾಖಲೆಗಳನ್ನು ಕೂಡ ಅಪ್ಲೋಡ್ ಮಾಡಬೇಕಾಗಿದೆ.ಮೆಟ್ರಾಷ್ 2 ಅಪ್ಲಿಕೇಶನ್‌ ‌ನ ಮೂಲಕ ಕುಟುಂಬ ವೀಸಾಗಾಗಿ ಇ-ಅರ್ಜಿ ನಮೂನೆಯ ಸ್ಥಿತಿಯನ್ನು ಪರಿಶೀಲಿಸಬಹುದು ಮತ್ತು ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸಲೂ ಬಹುದು.

ಯಾವುದೇ ಸಂದರ್ಭದಲ್ಲಿ, ಅಪ್ಲಿಕೇಶನ್ ಅಥವಾ ಸಲ್ಲಿಸಿದ ದಾಖಲೆಗಳಲ್ಲಿ ದೋಷವಿದ್ದಲ್ಲಿ ಅರ್ಜಿದಾರರಿಗೆ ತಿಳಿಸಲಾಗುತ್ತದೆ. ಅದರಲ್ಲಿ ತಿದ್ದುಪಡಿಗೆ ಅವಕಾಶವಿದೆ. ತಂದೆ, ತಾಯಿ, ಹೆಂಡತಿ, ಮಕ್ಕಳು ಮತ್ತು ನಿಕಟ ಸಂಬಂಧಿಗಳು ಮಾತ್ರ ಈ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಕಳೆದ ಎರಡು ತಿಂಗಳುಗಳಲ್ಲಿ ಸಚಿವಾಲಯ ಇ-ಸೇವೆಗಳನ್ನು ಪರಿಶೀಲಿಸಿದೆ ಮತ್ತು 100% ಯಶಸ್ಸನ್ನು ಕಂಡುಕೊಂಡಿದೆ.

ಕುಟುಂಬ ಭೇಟಿ ವೀಸಾಗೆ ಅರ್ಜಿ ಸಲ್ಲಿಸಲು ಪಾಸ್ಪೋರ್ಟ್ ಜನರಲ್ ನಿರ್ದೇಶನಾಲಯ, ಸೇವಾ ಕೇಂದ್ರಗಳಿಗೆ ಆಗಮಿಸುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಜನರಲ್ ಡೈರಕ್ಟರೇಟ್ ಆಫ್ ಇನ್ಫಾರ್ಮೇಶನ್ ಸಿಸ್ಟಂ‌ನ ಸಹಕಾರದೊಂದಿಗೆ ಜನರಲ್ ಡೈರೆಕ್ಟರೇಟ್ ಆಫ್ ಪಾಸ್‌ಪೋರ್ಟ್ ಪ್ರಯತ್ನಿಸಿದೆ ಎಂದು ಪ್ರವಾಸಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಬ್ರಿಗೇಡಿಯರ್ ಅಬ್ದುಲ್ಲಾ ಸಲೀಂ ಅಲ್ ಅನ್ಸಾರಿ, ಮಾಹಿತಿ ನೀಡಿದರು.

ಈ ಆನ್ಲೈನ್ ​​ಸೇವೆಯು ನಿರಂತರ ಪರಿಶೀಲನೆಗೆ ಒಳಪಟ್ಟಿರುತ್ತದೆ ಮತ್ತು ಪ್ರಮಾಣೀಕರಿಸುವ ತಿದ್ದುಪಡಿಗಳನ್ನೂ ಮಾಡಲಾಗುತ್ತದೆ.ಅರ್ಜಿ ಆನ್ಲೈನ್ ಆಗುವುದರೊಂದಿಗೆ, ರೆಸಿಡೆನ್ಸಿ ಸಮಯ ಉಳಿಸಬಹುದು ಮತ್ತು ಸೇವೆಗಳ ಗುಣಮಟ್ಟವನ್ನು ಸುಧಾರಿಸಬಹುದು.ಕಾಗದ ರಹಿತ ಸಚಿವಾಲಯ ಎನ್ನುವ ಗುರಿಯನ್ನು ಸಾಕಾರಗೊಳಿಸುವ ಪ್ರಯತ್ನಗಳ ಭಾಗವಾಗಿ ಸುಧಾರಣೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಅಲ್-ಅನ್ಸಾರಿ ಹೇಳಿದರು.

error: Content is protected !! Not allowed copy content from janadhvani.com