ಚಿಕ್ಕಮಗಳೂರು: ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಡಿವಿಷನ್ ಹಾಗೂ ಶಾಖೆಗಳಿಂದ ಆಯ್ದ ಸಕ್ರೀಯ ಕಾರ್ಯಕರ್ತರನ್ನು ಒಳಗೊಂಡ ಟೀಮ್ ಹಸನೈನ್ ಕಾರ್ಯಕರ್ತರ ಸಂಗಮವು ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷರು,ಚಿಕ್ಕಮಂಗಳೂರು ಜಿಲ್ಲಾಧ್ಯಕ್ಷರಾದ ಸಯ್ಯಿದ್ ಹಾಮಿಮ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಬದ್ರಿಯಾ ಜುಮ್ಮಾ ಮಸ್ಜಿದ್ ಸಭಾಂಗಣದಲ್ಲಿ ನಡೆಯಿತು.ಎಸ್ಸೆಸ್ಸೆಫ್ ರಾಜ್ಯ ನಾಯಕ ಹುಸೈನ್ ಸಅದಿ ಹೊಸ್ಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ನಾಯಕ ಮುಸ್ತಫಾ ನಯೀಮಿ ಮೋಂಟುಗೋಳಿ ತರಗತಿಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ರಾಜ್ಯ ಕೋಶಾಧಿಕಾರಿ ಯೂಸುಫ್ ಹಾಜಿ ಉಪ್ಪಳ್ಳಿ, ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಉಸ್ಮಾನ್ ಹಂಡುಗುಳಿ, ಶಾಹಿನ್ ಚಿಕ್ಕಮಗಳೂರು,ಇಬ್ರಾಹಿಂ ಮೂಡಿಗೆರೆ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ಝುಹ್ರಿ ಸ್ವಾಗತಿಸಿ ವಂದಿಸಿದರು.
Abdulla Raza jagalur