ದೋಹಾ: ಕತಾರ್ ಏರ್ವೇಸ್ ಪ್ರಯಾಣಿಕರು ಆನ್ಲೈನ್ ಟಿಕೆಟ್ ಜಾಲದ ಕುರಿತು ಎಚ್ಚರ ವಹಿಸುವಂತೆಯೂ ಅಧಿಕೃತ ಕೇಂದ್ರದಿಂದ ಮಾತ್ರ ಟಿಕೆಟ್‌ಗಳನ್ನು ಖರೀದಿಸುವಂತೆಯೂ ಅಧಿಕಾರಿಗಳು ತಿಳಿಸಿದ್ದಾರೆ.
ಕತಾರ್ ಏರ್ವೇಸ್‌ನ ಟಿಕೆಟ್‌ಗಳಿಗೆ ಅನಧಿಕೃತ ಆಫರ್ ನೀಡಿ ಅನೇಕ ಸಂದೇಶಗಳನ್ನು ನೀಡಲಾಗುತ್ತದೆ. ಇಂತಹ ಸಂದೇಶಗಳು ಲಭಿಸುವವರು ಪೊಲೀಸ್ ಅಥವಾ ಕತಾರ್ ಏರ್ವೇಸ್‌ನ reportfraud@qatarairways.com.qa ಎನ್ನುವ ವಿಳಾಸಕ್ಕೆ ಮಾಹಿತಿ ನೀಡಬಹುದು.
ಕತಾರ್ ಏರ್ವೇಸ್‌ನ ವೆಬ್‌ಸೈಟ್, ಏರ್ವೇಸ್‌ನ ಮಾರಾಟ ಕಚೇರಿಯಲ್ಲಿ ಅಥವಾ ಅಯಾಟ ಯಾತ್ರಾ ಏಜೆನ್ಸಿಳಿಂದ ಮಾತ್ರ ಟಿಕೆಟ್ ಗಳನ್ನು ಖರೀದಿಸಲು ಎಚ್ಚರಿಸಲಾಗಿದೆ.
ಕತಾರ್ ಏರ್ವೇಸ್ 25 ನೇ ವಾರ್ಷಿಕೋತ್ಸವದ ಅಂಗವಾಗಿ ಒಂದು ಡಾಲರ್ಗೆ ಎರಡು ಟಿಕೆಟ್‌ಗಳನ್ನು ನೀಡಲಾಗುವುದು ಎನ್ನುವ ಸಂದೇಶವನ್ನು ಈಗ ಪ್ರಚಾರಪಡಿಸಲಾಗುತ್ತಿದೆ.ಈ ಆಫರ್‌ಗಾಗಿ ನಮ್ಮ ಸೇವೆಯನ್ನು ಉತ್ತಮಗೊಳಿಸುವ ಸಲುವಾಗಿ ಮೂರು ಪ್ರಶ್ನೆಗಳಿಗೆ ಉತ್ತರಿಸಲು ನಕಲಿ ಸಂದೇಶದಲ್ಲಿ ತಿಳಿಸಲಾಗಿದೆ.ಇಂತಹ ಯಾವುದೇ ಆಫರ್ ಕತಾರ್ ಏರ್ವೇಸ್ ಘೋಷಿಸಿಲ್ಲ.
ಕತಾರ್ ಏರ್ವೇಸ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾತ್ರ ವಿವರಗಳನ್ನು ರವಾನೆ ಮಾಡಲಾಗುತ್ತದೆ. ರಿಕ್ರೂಟ್ಮೆಂಟ್‌ಗೆ ಡೆಪಾಸಿಟ್, ಹಣ ಅಥವಾ ವೀಸಾ ಶುಲ್ಕವನ್ನು ಪಡೆಯಲಾಗುವುದಿಲ್ಲ ಮತ್ತು ಮುಖತ ಇಲ್ಲವೇ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸದೆ ಕತಾರ್ ಏರ್ವೇಸ್‌ಗೆ ಯಾವುದೇ ನೇಮಕಾತಿ ಮಾಡಲಾಗುವುದಿಲ್ಲ ಎಂದು ಕತರ್ ಏರ್ವೇಸ್ ಅಧಿಕೃತವಾಗಿ ತಿಳಿಸಿದೆ.