ಅಬುಧಾಬಿ: ಲಗೇಜ್ ಕಳೆದುಕೊಂಡ ಯಾತ್ರಿಕನಿಗೆ 30,000 ದಿರ್ಹಮ್ ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಒಂದೇ ಕಂಪೆನಿಯ ವಿಮಾನದಲ್ಲಿ ಎರಡು ಬಾರಿ ಪ್ರಯಾಣಿಕ ತನ್ನ ಲಗೇಜುಗಳನ್ನು ಕಳೆದುಕೊಂಡಿದ್ದರು. ಅರ್ಜಿದಾರನು 100,000 ದಿರ್ಹಂ ಪರಿಹಾರಕ್ಕಾಗಿ ಅಬುಧಾಬಿಯ ಸಿವಿಲ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪ್ರಥಮವಾಗಿ ಪೂರ್ವ ಏಷ್ಯಾಕ್ಕೆ ಪ್ರಯಾಣಿಸುವಾಗ, ಅವರು ತಮ್ಮ ಅಮೂಲ್ಯ ಸಾಮಾನುಗಳನ್ನು ಕಳೆದುಕೊಂಡರು. ಆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ದೂರುದಾರರು ನ್ಯಾಯಾಲಯಕ್ಕೆ ತಿಳಿಸಿದರು. ವಿಶ್ವವಿದ್ಯಾನಿಲಯದಲ್ಲಿ ಸೇರಲು ಅರಬ್ ದೇಶಕ್ಕೆ ಪ್ರಯಾಣಿಸುವಾಗ ಎರಡನೇ ಬಾರಿಗೆ ಅವರ ಲಗೇಜು ಕಳೆದುಹೋಗಿವೆ.
ವಿಶ್ವವಿದ್ಯಾಲಯದ ಪ್ರವೇಶಕ್ಕೆ ಬೇಕಾದ ಅಕಾಡೆಮಿಕ್ ಸರ್ಟಿಫಿಕೇಟ್ ಮತ್ತು ದಾಖಲೆಗಳು ತನ್ನ ಲಗೇಜ್‌ನಲ್ಲಿದ್ದವು ಎಂದು ಮನವರಿಕೆ ಮಾಡಿದರೂ ಏರ್ಪೋರ್ಟ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದರು. ಸರ್ಟಿಫಿಕೇಟ್ ಕಳದುವಕೊಂಡ ಕಾರಣ ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯಲು ಅರ್ಜಿದಾರರಿಗೆ ಸಾಧ್ಯವಾಗಲಿಲ್ಲ. ಇದು ಮಾನಸಿಕ, ಗಂಭೀರ ಆರ್ಥಿಕ ತೊಂದರೆಗಳಿಗೆ ಕಾರಣವಾಗಿದೆ. ಪ್ರಯಾಣಿಕನು ವಿಮಾನಯಾನ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿರುವುದಾಗಿ ನ್ಯಾಯಾಲಯವು ಕಂಡುಕೊಂಡಿದಿದೆ.
ಹಾಗಾಗಿ ಪ್ರಯಾಣಿಕರಿಗೆ ಪರಿಹಾರವನ್ನು ಪಡೆಯಲು ಹಕ್ಕು ಇದೆ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದೆ.