janadhvani

Kannada Online News Paper

ಕೆಸಿಎಫ್ ನಿಂದ ಭಾರತೀಯ ಪ್ರಥಮ ಹಜ್ಜ್ ತಂಡಕ್ಕೆ ಅದ್ದೂರಿ ಸ್ವಾಗತ

ಮದೀನಾ : ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಭಾರತದಿಂದ ಆಗಮಿಸಿದ ಮೊದಲ ಹಜ್ಜಾಜಿಗಳ ತಂಡ ಶನಿವಾರದಂದು ಮದೀನಾ ಮುನವ್ವರದ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿತು. ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಹಜ್ಜ್ ವಾಲೇಂಟಿಯರ್ ಕೋರ್ ಕಾರ್ಯಕರ್ತರು ಹಜ್ಜಾಜಿಗಳಿಗೆ ನೀರು ಹಾಗೂ ಖರ್ಜೂರ ನೀಡಿ ಆದರದಿಂದ ಸ್ವಾಗತಿಸಿದರು.

ನಂತರ ಹಜ್ಜಾಜಿಗಳು ತಂಗುವ ವಸತಿಗಳಿಗೆ ತೆರಳಿದ ಹೆಚ್.ವಿ.ಸಿ ಕಾರ್ಯಕರ್ತರು ಹಜ್ಜಾಜಿಗಳ ಲಗೇಜ್ ಸಾಗಿಸಲು ಸಹಕರಿಸಿದರು. ಈ ವೇಳೆ ಭೇಟಿ ನೀಡಿದ ಭಾರತೀಯ ಕನ್ಸೂಲೆಟ್ ಜನರಲ್ ನೂರ್ ರಹ್ಮಾನ್ ಶೇಖ್, ಹಜ್ಜಾಜಿಗಳಿಗೆ ನೀಡಲಾದ ವಸತಿ ಸೌಲಭ್ಯ ಗಳ ಬಗ್ಗೆ ಪರಿಶೀಲನೆ ನಡೆಸಿದರು. ಹಜ್ಜಾಜಿಗಳ ಸಮಸ್ಯೆ ಬಗೆಹರಿಸಲು ತಕ್ಷಣವೇ ಕ್ರಮಕೈಗೊಳ್ಳುವಂತೆ ಸಿಬ್ಬಂದಿ ಗಳಿಗೆ ತಿಳಿಸಿದರು.ಇನ್ನು ವಿವಿಧ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಅವರು ಹಜ್ಜಾಜಿಗಳ ಸಿಮ್ ಕಾರ್ಡ್, ಲಗೇಜ್ ಮಿಸ್ಸಿಂಗ್ ಸಮಸ್ಯೆ ಪರಿಹರಿಸುವ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು .ದೆಹಲಿ, ಗಯಾ, ಗುವಾಹಟಿ, ಲಕ್ನೊ ಹಾಗೂ ಶ್ರೀ ನಗರ ಸೇರಿದಂತೆ 5 ವಿಮಾನಗಳಲ್ಲಿ 3000ಕ್ಕೂ ಅಧಿಕ ಹಜ್ಜಾಜಿಗಳು ಶನಿವಾರ ದಂದು ಮದೀನಾಕ್ಕೆ ಆಗಮಿಸಿದ್ದಾರೆ. ಈ ವೇಳೆ ಕೆಸಿಎಫ್ ಹೆಚ್.ವಿ.ಸಿ ಮದೀನಾ ಚೇರ್ಮೆನ್ ತಾಜುದ್ದೀನ್ ಸುಳ್ಯ, ಕನ್ವೀನರ್ ರಝಾಕ್ ಸಂತೋಷ್ ನಗರ , ಫಾರೂಖ್ ನಈಮಿ, ಜಬ್ಬಾರ್ ಉಪ್ಪಿನಂಗಡಿ, ರಝಾಕ್ ಬೈತಡ್ಕ,ಅಶ್ರಫ್ ಸಖಾಫಿ ನೂಜಿ,ಅಬೂಬಕ್ಕರ್ ಉದ್ದ ಬೆಟ್ಟು, ಇಕ್ಬಾಲ್ ಕುಪ್ಪೆಪದವು, ಹೈದರ್ ಉದ್ದಬೆಟ್ಟು, ಉಮರ್ ಗೇರುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ವರದಿ:ಹಕೀಮ್ ಬೋಳಾರ್

error: Content is protected !! Not allowed copy content from janadhvani.com