ಟೆಹ್ರಾನ್ : ಐದು ವಾರಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಯುದ್ಧ ವಿಮಾನವೊಂದನ್ನು ಇರಾನ್ ಸೈನ್ಯವು ಹೊಡೆದು ಉರುಳಿಸಿದೆ ಎಂದು ವರದಿಯಾಗಿದೆ. ವಿಮಾನದಲ್ಲಿದ್ದ ಸೈನಿಕರಿಗಾಗಿ ಹುಡುಕಾಟವನ್ನು ತೀವ್ರಗೊಳಿಸಲಾಗಿದೆ ಎಂದು ಯುಎಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪತನಗೊಂಡಿರುವುದು ಇಬ್ಬರು ಪ್ರಯಾಣಿಸಬಹುದಾದ ಎಫ್-15ಇ ಸ್ಟ್ರೈಕ್ ಈಗಲ್ (F-15E Strike Eagle) ಮಾದರಿಯ ವಿಮಾನ ಎಂದು ತಜ್ಞರು ಗುರುತಿಸಿದ್ದಾರೆ. ಪತನಗೊಂಡ ವಿಮಾನದ ಒಬ್ಬ ಸಿಬ್ಬಂದಿಯನ್ನು ಅಮೆರಿಕ ಯಶಸ್ವಿಯಾಗಿ ರಕ್ಷಿಸಿದೆ ಎಂದು ಅಧಿಕಾರಿಗಳು ಸಿಬಿಎಸ್ ನ್ಯೂಸ್ಗೆ ತಿಳಿಸಿದ್ದಾರೆ.
ವಿಮಾನದ ಅವಶೇಷಗಳೆಂದು ಹೇಳಲಾದ ಹಲವಾರು ಚಿತ್ರಗಳು ಇರಾನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಮಾನದ ಸಿಬ್ಬಂದಿಯನ್ನು ಸೆರೆಹಿಡಿಯುವವರಿಗೆ ಅಥವಾ ಸಂಹರಿಸುವವರಿಗೆ ವಿಶೇಷ ಗೌರವ ಮತ್ತು ಬಹುಮಾನ ನೀಡುವುದಾಗಿ ಇರಾನ್ ಅಧಿಕಾರಿಗಳು ಘೋಷಿಸಿದ್ದಾರೆ. “ಇರಾನ್ ಅನ್ನು ಶಿಲಾಯುಗಕ್ಕೆ ಮರಳಿ ಕಳುಹಿಸುತ್ತೇವೆ” ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀವ್ರ ಎಚ್ಚರಿಕೆಯ ಬೆನ್ನಲ್ಲೇ ಈ ಹೊಸ ಬೆಳವಣಿಗೆಗಳು ನಡೆದಿವೆ. ಈ ಯುದ್ಧದಲ್ಲಿ ಇದುವರೆಗೆ 13 ಯುಎಸ್ ಸೈನಿಕರು ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇರಾನ್ ಬಳಿ ಇನ್ನೂ ಬೃಹತ್ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹವಿದೆ ಎಂದು ಗುಪ್ತಚರ ಸಂಸ್ಥೆಗಳು ಅಂದಾಜಿಸಿವೆ. ಮತ್ತೊಂದೆಡೆ, ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆ ಮತ್ತು ಹಣದುಬ್ಬರಕ್ಕೆ ಕಾರಣವಾಗಿರುವ ಈ ಯುದ್ಧವನ್ನು ಕೂಡಲೇ ನಿಲ್ಲಿಸಬೇಕೆಂದು ಅಮೆರಿಕದ ಜನತೆಯಿಂದ ತೀವ್ರ ಒತ್ತಾಯ ಕೇಳಿಬರುತ್ತಿದೆ. ಹೆಚ್ಚಿನ ಸಮೀಕ್ಷೆಗಳು ಟ್ರಂಪ್ ಸರ್ಕಾರದ ಯುದ್ಧ ನೀತಿಯ ವಿರುದ್ಧದ ಜನಭಾವನೆಯನ್ನು ಪ್ರತಿಫಲಿಸುತ್ತಿವೆ. ಈ ಘಟನೆಯ ಕುರಿತು ಪೆಂಟಗನ್ ಅಥವಾ ಯುಎಸ್ ಸೆಂಟ್ರಲ್ ಕಮಾಂಡ್ ಇದುವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
















ಇನ್ನಷ್ಟು ಸುದ್ದಿಗಳು
’60 ದಿನಗಳಲ್ಲಿ ಹೊಸ ಕೆಲಸ ಹುಡುಕಿ, ಇಲ್ಲದಿದ್ದರೆ ದೇಶ ತೊರೆಯಿರಿ’- ಭಾರತೀಯ ಉದ್ಯೋಗಿಗಳಿಗೆ ಆತಂಕ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
‘ಯುದ್ಧ ಕೊನೆಗೊಳಿಸುವುದಕ್ಕೆ ಆದ್ಯತೆ ನೀಡಬೇಕು’- ಅಮೆರಿಕದ 14 ಅಂಶಗಳ ಪ್ರಸ್ತಾವನೆಗೆ ಇರಾನ್ ಪ್ರತಿಕ್ರಿಯೆ
ಕೊಲೆ ಬೆದರಿಕೆ, ದಂಗೆಯ ಸಾಧ್ಯತೆ; ನಿವಾಸ ಬಿಟ್ಟು ಹೊರಬಾರದ ಪುಟಿನ್- ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ
ಇರಾಕ್ನ ನೂತನ ಪ್ರಧಾನ ಮಂತ್ರಿಯಾಗಿ ಉದ್ಯಮಿ ಅಲಿ ಅಲ್-ಝೈದಿ ಆಯ್ಕೆ- ದೇಶದ ರಾಜಕೀಯದಲ್ಲಿ ಹೊಸ ಯುಗ?
ಅಮೆರಿಕಕ್ಕೆ ಇರಾನ್ನಿಂದ ‘ಬಿಗ್ ಡೀಲ್’: ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ಧ, ಆದರೆ ಒಂದು ಷರತ್ತು!
ಟ್ರಂಪ್ ಔತಣಕೂಟದಲ್ಲಿ ಶೂಟೌಟ್: ನಾಸಾ ಫೆಲೋಶಿಪ್ ಪಡೆದ ಎಂಜಿನಿಯರ್ ಬಂಧನ
ಇರಾನ್ ಜೊತೆಗಿನ ಸಂಧಾನಕ್ಕೆ ಬ್ರೇಕ್? – ಅಮೆರಿಕ ನಿಯೋಗದ ಪ್ರವಾಸ ರದ್ದುಪಡಿಸಿದ ಟ್ರಂಪ್
ಇಸ್ರೇಲ್ ಪ್ರಧಾನಿಗೆ ಕ್ಯಾನ್ಸರ್: ಇರಾನ್ ಭಯದಿಂದ ವಿಷಯ ಮುಚ್ಚಿಟ್ಟಿದ್ದಾಗಿ ಸ್ಪಷ್ಟನೆ
ಇರಾನ್ ಪರ ಗುಂಪುಗಳ ದಾಳಿ ಹಿನ್ನೆಲೆ: ಇರಾಕ್ಗೆ ಸೇರಬೇಕಿದ್ದ 500 ಮಿಲಿಯನ್ ಡಾಲರ್ ನಗದು ಸಾಗಾಟವನ್ನು ತಡೆದ ಅಮೆರಿಕ