ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಜುಬೈಲ್ ಘಟಕ ಹಾಗೂ ಯುವಜನ ವಿಭಾಗ ಆಯೋಜಿಸಿದ್ದ ಬೃಹತ್ ರಮಳಾನ್ ಕೂಟ ದಿನಾಂಕ 27, ಫೆಬ್ರವರಿ 2026 ಶುಕ್ರವಾರ ಮುಸ್ಸಂಜೆ ಅಲ್ ಫಲಾಹ್ ಮೈದಾನ ಜುಬೈಲ್ ನಲ್ಲಿ ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.
ಡಿಕೆಯಸ್ಸಿ ಕೇಂದ್ರ ಸಮಿತಿ ಅಧೀನದ ಸುನ್ನಿ ಗೈಡೆನ್ಸ್ ಬ್ಯೂರೋ ಇದರ ಅಧ್ಯಕ್ಷರೂ ಪವಿತ್ರ ಖುರ್ ಆನ್ ನ ಕನ್ನಡ ಅನುವಾದಕರೂ ಆದ ಸಯ್ಯಿದ್ ಹಬೀಬುಲ್ಲಾ ತಂಘಳ್ ಪೆರುವಾಯಿ ಪ್ರಾರ್ಥನೆ ಗೈದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಜನಾಬ್ ಯು.ಟಿ. ಖಾದರ್ ಫರೀದ್ ಮಾತನಾಡುತ್ತಾ ಶಿಕ್ಷಣದ ಮಹತ್ವವನ್ನು ವಿವರವಾಗಿ ತಿಳಿಸಿ, ಡಿಕೆಯಸ್ಸಿಯು ಶೈಕ್ಷಣಿಕ ಪ್ರಗತಿಯಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ್ದು ಮಾದರಿ ಸಂಘಟನೆಯಾಗಿದೆ ಹಾಗೂ
ಡಿಕೆಯಸ್ಸಿಯ ಇಫ್ತಾರ್ ಮೀಟ್ ಗೆ ಆಗಮಿಸಿರುವ ಸರ್ವ ಸಹೋದರರು ಸಂಘಟನೆಯ ಅಭಿವೃಧ್ಧಿ ಕಾರ್ಯಗಳಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಉಸ್ತಾದ್ ಬಶೀರ್ ಸಖಾಫಿ ಖಿರಾಅತ್ ಪಠಿಸಿದರು.
ಅಬ್ದುಲ್ ಹಮೀದ್ ಅಸ್ಕಾಫ್ ಪ್ಲಾಂಟ್ ಸೊಲೂಷನ್ ಸ್ವಾಗತ ಭಾಷಣ ಮಾಡಿದರು.
ಡಿಕೆಯಸ್ಸಿ ವಲಯ ದಾಈ ಝುಬೈರ್ ಸಖಾಫಿ ರಮಳಾನ್ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಡಿಕೆಯಸ್ಸಿ ವಿಷನರಿ ಚೆಯರ್ಮ್ಯಾನ್ ಹಾಜಿ. ಝಕರಿಯ್ಯ ಜೋಕಟ್ಟೆ ಅಲ್ ಮುಝೈನ್, ಅಶ್ರಫ್ ಎಕ್ಸಪರ್ಟೈಸ್, ಖಮರುದ್ದೀನ್ ಗೂಡಿನ ಬಳಿ ಸಂದರ್ಭೋಚಿತ
ವಾಗಿ ಮಾತನಾಡಿದರು.


ಶರೀಫ್ ಬೋಳಾರ್, ಮುಹಮ್ಮದ್ ಹಾಜಿ ಕರ್ನಿರೆ, ನಝೀರ್ ಅಲ್ ಫಲಾಹ್, ಇಸ್ಮಾಯೀಲ್ ಝಕರಿಯ್ಯ, ಕೆ.ಸಿ.ಇಸ್ಮಾಯೀಲ್ ಹಾಜಿ ಕಿನ್ಯ, ಫಾರೂಖ್ ಕರ್ನಿರೆ, ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್, ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್ , ಡಿಕೆಯಸ್ಸಿ ವಿಷನ್ 30 ಚೆಯರ್ಮ್ಯಾನ್ ಹಾತಿಂ ಕೂಳೂರು, ಶಬೀರ್ ಎಂಪ್ಲಿಟ್ಯೂಡ್, ಮುಬೀನ್ ಟೇಬಲ್ ಫೋರ್ , ರಝೀಂ ಎಕ್ಸೆಲನ್, ಮುಸ್ಥಫ ನಈಮೀ ಹಾವೇರಿ, ವಲಯಾಧ್ಯಕ್ಷ ಅಶ್ರಫ್ ನಾಳ, ಇಫ್ತಾರ್ ಮೀಟ್ ಚೆಯರ್ಮ್ಯಾನ್ ಮುಸ್ಥಫ ಮೈನ ಉಪ್ಪಿನಂಗಡಿ,ಮೊದಲಾದವರು ಉಪಸ್ಥಿತರಿದ್ದರು.
ಡಿಕೆಯಸ್ಸಿ ದಮ್ಮಾಂ ಅಧೀನ ಕ್ಕೊಳಪಟ್ಟ ಅಲ್ ಹಸ್ಸ, ಅಲ್ ಖೋಬರ್, ದಮ್ಮಾಂ, ಜುಬೈಲ್ ಹಾಗೂ ಜುಬೈಲ್ ಯೂತ್ ವಿಂಗ್ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸಿದರು.
ಈ ಸುಸಂದರ್ಭ ಹಬೀಬುಲ್ಲಾ ತಂಙಳ್ , ಚೆಯರ್ಮ್ಯಾನ್ ಮುಸ್ಥಫ ಮೈನಾ, ದಮ್ಮಾಂ ವಲಯ ಅಧ್ಯಕ್ಷ ಅಶ್ರಫ್ ನಾಳ, ಫೇಸ್ ಕಂಪೆನಿ ಮುಖ್ಯಸ್ಥ ಮುಹಮ್ಮದ್ ಹಾಜಿ ಕರ್ನಿರೆ, ಶಬೀರ್ ಎಂಪ್ಲಿಟ್ಯೂಡ್, ಮುಶ್ತಾಖ್ ಫತಹ್ ಅಲ್ ಜುಬೈಲ್, ಇಸ್ಮಾಯೀಲ್ ಝಕರಿಯ್ಯ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕೊನೆಯಲ್ಲಿ ಕೆ.ಎಚ್.ಮುಹಮ್ಮದ್
ರಫೀಖ್ ಸೂರಿಂಜೆ ಧನ್ಯವಾದ
ಅರ್ಪಿಸಿದರು ಹಾಗೂ ಮುಹಮ್ಮದ್ ಅಲೀ ಮುಝೈನ್ ಕಾರ್ಯಕ್ರಮ ನಿರೂಪಿಸಿದರು.
3000 ಉಪವಾಸಿಗರು ಕುಟುಂಬ ಸಮೇತ ಆಗಮಿಸಿ ಈ ಬೃಹತ್ ಇಫ್ತಾರ್ ಕೂಟಕ್ಕೆ ಸಾಕ್ಷಿಯಾದರು.
ಅಲ್ಲಾಹು ಸುಬ್ ಹಾನಹೂ ವತಆಲಾ ಈ ಸಮಾರಂಭವನ್ನು ಸ್ವೀಕರಿಸಿ, ಸರ್ವರಿಗೂ ಇಹ ಪರ ಯಶಸ್ಸು ನೀಡಲಿ. ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ಪ್ರೋತ್ಸಾಹ ನೀಡಿ ಸಹಕರಿಸಿ ಯಶಸ್ವಿಗೊಳಿಸಿದ ಪ್ರತಿಯೊಬ್ಬ ಸಹೋದರ ಸದಸ್ಯ, ಹಿತೈಷಿ, ದಾನಿಗಳಿಗೆ ಡಿಕೆಯಸ್ಸಿಯ
ಹೃದಯಾಂತರಾಳದ ಹೃತ್ಪೂರ್ವಕ ಶುಭ ಹಾರೈಕೆಗಳನ್ನು ಅರ್ಪಿಸಿದೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ತಬೂಕ್ ಘಟಕದ ವಾರ್ಷಿಕ ಮಹಾಸಭೆ
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಗಲ್ಫ್ ರಾಷ್ಟ್ರಗಳಿಂದ 8.43 ಲಕ್ಷ ಭಾರತೀಯರು ವಾಪಸ್
ಶಾಫಿ ಸಅದಿ ವಿರುದ್ಧ ಸುಳ್ಳು ಸುದ್ದಿ ಪ್ರಕಟ: ‘ಮಿನಾರಂ’ ಡಿಜಿಟಲ್ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ
ಎಪ್ರಿಲ್ 12: ಮಾದರಿ ಮದುವೆ ಅಭಿಯಾನ ಸಮಾರೋಪದ ಪ್ರಚಾರಾರ್ಥ ಸಾಂಘಿಕ ನಾಯಕರ ಸಭೆ
ಕಾಟಿಪಳ್ಳ: ನೂತನ ಮದ್ರಸ ಕಟ್ಟಡ ಉದ್ಘಾಟನಾ ಸಮಾರಂಭ- ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ
ಶರಫುಲ್ ಉಲಮಾ 7ನೇ ವಾರ್ಷಿಕ ಅನುಸ್ಮರಣೆ- ಮೇ 13, 14 ರಂದು ವಿವಿಧ ಕಾರ್ಯಕ್ರಮ
ಬಶೀರ್ ಕಿನ್ಯ ಅವರಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ: ಸಾಹಿತ್ಯ ಲೋಕದ ಬಹುಭಾಷಾ ಪಂಡಿತನಿಗೆ ಒಲಿದ ಮನ್ನಣೆ
ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಪ್ರಯಾಣ- ಐತಿಹಾಸಿಕ ‘ಮಕ್ಕಳ ಸ್ನೇಹಿ ಸಾರಿಗೆ’ ಯೋಜನೆ ಸಿದ್ಧ
ಕಿನ್ಯಾ ‘ಗೋಲ್ಡನ್ ಹೆಲ್ತ್’ ಶಿಲಾನ್ಯಾಸ: ರೋಗ ಬರದಂತೆ ತಡೆಯುವ ಜನಜಾಗೃತಿ ಇಂದಿನ ಅಗತ್ಯ- ಸ್ಪೀಕರ್ ಯು.ಟಿ. ಖಾದರ್
ಡಿಕೆಎಸ್ಸಿ ಅಲ್-ಖೋಬರ್ ಘಟಕ: ಮಾಸಿಕ ಸಭೆ ಹಾಗೂ ಗಣ್ಯರಿಗೆ ಸನ್ಮಾನ