janadhvani

Kannada Online News Paper

‘ಖುತಬಾ ಸಂಗಮ’ – ಎಸ್ ಜೆ ಎಂ ಸೌತ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭ ಶರೀಅತ್ ಮಿತಿ ಮೀರಿ ಹೋಗುತ್ತಿದ್ದು,ದುಂದುವೆಚ್ಚವೂ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎಸ್ ವೈ ಎಸ್ ನಡೆಸುವ ಮಾದರಿ ಮದುವೆ ಎಂಬ ಶತದಿನ ಅಭಿಯಾನದ ಪ್ರಯುಕ್ತ ದ.ಕ.ವೆಸ್ಟ್ ಜಿಲ್ಲಾ ಸಮಿತಿ ಡಿಸೆಂಬರ್ 16 ಮಂಗಳವಾರ ಪಂಪ್ವೆಲ್ DKC ಹಾಲ್ ನಲ್ಲಿ ಖತೀಬರಿಗಾಗಿ ‘ಖುತಬಾ ಸಂಗಮ’ ಹಮ್ಮಿಕೊಂಡಿದೆ.

ಖ್ಯಾತ ವಿದ್ವಾಂಸ, ವಾಗ್ಮಿ, ಚಿಂತಕ ಇಬ್ರಾಹೀಂ ಸಖಾಫಿ ಪುಝಕ್ಕಾಟಿರಿ ವಿಷಯ ಮಂಡನೆ ನಡೆಸಲಿದ್ದಾರೆ. ಮೊಹಲ್ಲಾಗಳ ಧಾರ್ಮಿಕ ನಾಯಕತ್ವದ ಮುಂಚೂಣಿಯಲ್ಲಿರುವ ಖತೀಬರುಗಳು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಪಡೆದು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ.ಆ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯವಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಖತೀಬರು,ಇಮಾಮರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಸ್ ಜೆ ಎಂ ಸೌತ್ ಜಿಲ್ಲಾ ಸಮಿತಿ ಕರೆ ನೀಡಿದೆ.