janadhvani

Kannada Online News Paper

ಕೆಸಿಎಫ್ ಒಮಾನ್: ರಬೀಹ್-25 ಬೃಹತ್ ಮೀಲಾದ್ ಸಮಾವೇಶ

ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಬೃಹತ್ ಮೀಲಾದ್ ಸಮಾವೇಶವು ಸೆಪ್ಟೆಂಬರ್ 19, ಶುಕ್ರವಾರದಂದು ಗೋಲ್ಡನ್ ಟುಲಿಪ್ ಹೆಡಿಂಗ್ಟನ್, ರುವಿ ಯಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮವನ್ನು ಸಯ್ಯಿದ್ ಆಬಿದ್ ಅಲ್ ಐದರೂಸಿ ಎಮ್ಮೆಮ್ಮಾಡು ರವರ ದುಆ ಮೂಲಕ ಪ್ರಾರಂಭಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಅಯ್ಯೂಬ್ ಕೋಡಿ ಸ್ವಾಗತ ಭಾಷಣ ಮಾಡಿದರು. ಕರ್ನಾಟಕ ಸುನ್ನಿ ಜಮಿಯತುಲ್ ಉಲಮಾ ಕಾರ್ಯದರ್ಶಿ ಟಿ.ಎಂ. ಮುಹ್ಯುದ್ದೀನ್ ಕಾಮಿಲ್ ಸಖಾಫಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಂಝ ಸುಲೈಮಾನ್ ಕನ್ನಂಗರ್ ಸಭಾಧ್ಯಕ್ಷತೆ ವಹಿಸಿದರು.

ಮುಖ್ಯ ಪ್ರಭಾಷಣವನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಮೀದ್ ಸಅದಿ ಈಶ್ವರಮಂಗಲ ಮಾಡಿದರು. ಉರ್ದು ಭಾಷಣವನ್ನು ಮೌಲಾನಾ ಸಲ್ಮಾನ್ ರಝಾ ಫರೀದಿ ಮಿಸ್ಬಾಹಿ ಮಾಡಿದರು. ನಅತ್ ಆಲಾಪನೆಯನ್ನು ಮುಈನುದ್ದೀನ್ ಖಾದ್ರಿ, ಬೆಂಗಳೂರು ನೆರವೇರಿಸಿದರು. ಐಸಿಎಫ್ ಇಂಟರ್ನ್ಯಾಷನಲ್ ಸೆಕ್ರೆಟರಿ ನಿಸಾರ್ ಸಖಾಫಿ (ವಯನಾಡ್) ಹಾಗೂ ಕೆಸಿಎಫ್ ಸೌದಿ ಅರೇಬಿಯಾ ಅಧ್ಯಕ್ಷ ರಶೀದ್ ಸಖಾಫಿ ಶುಭಾಶಯ ಭಾಷಣ ಮಾಡಿದರು.

ಕೆಸಿಎಫ್ ದಾರುಲ್ ಅಮಾನ್ ಮನೆ ನಿರ್ಮಾಣ ಯೋಜನೆಯ ನೇತೃತ್ವ ವಹಿಸಿದ ಅಂತರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಹಾಜಿ ಬರಕ, ಅಬ್ಬಾಸ್ ಮರಕ್ಕಡ, ಲತೀಫ್ ಮಂಜೇಶ್ವರ ಹಾಗೂ ಕೆಸಿಎಫ್ ವಿವಿಧ ಚಟುವಟಿಕೆಗಳಲ್ಲಿ ಸಹಕರಿಸುತ್ತಿರುವ ಆಬಿದ್ ಪಾಶ ಬಾಳೆಹೊನ್ನೂರು, ಹಸೀಫ್ ಇಕ್ಬಾಲ್ ಮತ್ತು ಎಸ್. ಮುಹಮ್ಮದ್ ಹಾಜಿ ಇವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಭೆಗೆ ಮುನ್ನ ಆದಂ ಮದನಿ, ಇಕ್ಬಾಲ್ ಮದನಿ (ಚೆನ್ನಾರ್), ಇಫಾಝ್ ಮರ್ಝೂಕಿ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ಜರುಗಿತು. ಸಂಜೆ ನಡೆದ ಮಕ್ಕಳ ಕಾರ್ಯಕ್ರಮವನ್ನು ಝುಬೈರ್ ಸಅದಿ ನಿರ್ವಹಿಸಿದರು ಹಾಗೂ ಶಾಕಿರ್ ಸುಳ್ಯ ನಿರೂಪಿಸಿದರು. ಮಕ್ಕಳಿಂದ

ಮದ್ಹ್ ಹಾಡುಗಳು, ಭಾಷಣಗಳು ನಡೆದವು. ಮದ್ರಸತುಲ್ ಹುದಾ ಗುಬ್ರಾ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ಹಾಗೂ ನಶೀದತುಲ್ ಅರಬಿಯಾ ಕಾರ್ಯಕ್ರಮ ನಡೆದವು. ಕೊನೆಗೆ ಸಯ್ಯಿದ್ ಸುಹೈಲ್ ಅಸ್ಸಖಾಫ್ ಮಡಕ್ಕರ ದುಆ ಮಜ್ಲಿಸ್ ಗೆ ನೇತೃತ್ವ ನೀಡಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ನಾಯಕರಾದ ಫೈಸಲ್ ಕೃಷ್ಣಾಪುರ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಇಬ್ರಾಹಿಂ ಹಾಜಿ ಬ್ರೈಟ್, ಹಕೀಂ ತುರ್ಕಳಿಕೆ, ಇಬ್ರಾಹಿಂ ಹಾಜಿ ಅತ್ರಾಡಿ, ಆರಿಫ್ ಕೋಡಿ ಹಾಗೂ ರಾಷ್ಟ್ರೀಯ ಸಮಿತಿಯ ಉಮರ್ ಸಖಾಫಿ ಎಡಪ್ಪಾಳ್, ಸಂಶುದ್ದೀನ್ ಪಾಲೆತಡ್ಕ, ಬಾಷಾ ತೀರ್ಥಹಳ್ಳಿ, ಸಾದಿಕ್ ಹಾಜಿ ಸುಳ್ಯ, ಹನೀಫ್ ಮಣ್ಣಾಪು, ಉಬೈದುಲ್ಲಾ ಸಖಾಫಿ, ಸಿದ್ದೀಕ್ ಮಾಂಬ್ಳಿ, ಇಕ್ಬಾಲ್ ಎರ್ಮಾಲ್, ಶಫೀಕ್ ಮಾರ್ನಬೈಲ್, ಕಾಸಿಂ ಪೊಯ್ಯತ್ತಬೈಲ್ ಸೇರಿದಂತೆ ಅನೇಕ ರಾಷ್ಟ್ರೀಯ, ಝೋನ್, ಸೆಕ್ಟರ್, ಯುನಿಟ್ ನಾಯಕರು, ಕಾರ್ಯಕರ್ತರು, ಹಿತೈಷಿಗಳು, ಮಕ್ಕಳು ಹಾಗೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಕಲಂದರ್ ಬಾವ ಮತ್ತು ಸಲೀಂ ಮಿಸ್ಬಾಹಿ ನಿರೂಪಿಸಿದರು.