ಮಂಗಳೂರು : – ವಾಯ್ಸ್ ಆಫ್ ಪೀಸ್ ವತಿಯಿಂದ ಆದಿತ್ಯವಾರ ಎ1 ಭಾಗ್ ನಲ್ಲಿ ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್ ಹಾಗೂ ದಫ್ಪು ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ನಡುಪಳ್ಳಿ ಜುಮಾ ಮಸೀದಿ ಖತೀಬರಾದ ಬಹು ! ಕೆ ಎಸ್ ರಿಯಾಝ್ ಫೈಝಿ ಕಕ್ಕಿಂಜೆ ದುಆ ದೊಂದಿಗೆ ಚಾಲನೆ ನೀಡಿ ಸಮಾರೋಪದಲ್ಲಿ ಹಿತವಚನ ನೀಡಿದರು.
ಕಾರ್ಯಕ್ರಮ ದ ಉದ್ಘಾಟನೆಯನ್ನು ಖಂಡತ್ ಪಳ್ಳಿ ಜುಮಾ ಮಸೀದಿ ಖತೀಬರಾದ ಪಿ ಎ ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಸಖಾಫಿ ಉದ್ಘಾಟಿಸಿದರು.
ಮಗ್ರಿಬ್ ನಂತರ ನಡೆದ ದಪ್ಪು ಸ್ಪರ್ಧೆ ಯಲ್ಲಿ ಸ್ಥಳೀಯ ಹಲವು ತಂಡಗಳು ಭಾಗವಹಿಸಿದ್ದವು..

ಕಂಡತ್ ಪಳ್ಳಿ ಮಹಮ್ಮದಿಯ್ಯಾ ಮದ್ರಸ ಪ್ರಥಮ , ಬಂದರ್ ಅಝ್ ಹರಿಯ್ಯಾ ಮದ್ರಸ ದ್ವಿತೀಯ. ಹಾಗೂ ಅಝ್ ಹರಿಯ್ಯಾ ಬ್ರಾಂಚ್ ಮದ್ರಸ ತೃತೀಯ ಸ್ಥಾನ ಪಡೆದುಕೊಂಡಿತು.
ನಂತರ ಟ್ರೋಫಿ ಹಾಗೂ ನಗದು ವಿತರಣೆ ನಡೆಸಲಾಯಿತು.
ಇಶಾ ನಂತರ ನಡೆದ ಮೌಲಿದ್ ಮಜ್ಲಿಸ್ ನಲ್ಲಿ ಮಸ್ಜಿಉತ್ತಖ್ವ ಖತೀಬ್ ಮುಹಮ್ಮದ್ ಸಖಾಪಿ ನೇತೃತ್ವದಲ್ಲಿ ಮುಹದ್ದಿನ್ ಇಬ್ರಾಹಿಂ ಮುಸ್ಲಿಯಾರ್ ಆಲಾಪನೆ ಮಾಡಿದರು. ಖದೀಜ ಮಸೀದಿ ಪಳ್ನೀರ್ ಇಮಾಮ್ ಸಹೀದ್ ಹಿಮಮಿ ಸಖಾಫಿ,ಹಾಗೂ ಸಲ್ಮಾನ್ ನದ್ವಿ ಪಂಪುವೆಲ್ ಜೊತೆಗಿದ್ದರು.
ಈ ಕಾರ್ಯಕ್ರಮ ದಲ್ಲಿ ಕುದ್ರೋಳಿ ಕಾರ್ಪೋರೇರ್ ಶಂಸುದ್ದೀನ್ ಎಚ್ ಬಿಟಿ, ದರ್ಗಾ ಅಲ್ತಾಫ್ ಕುದ್ರೋಳಿ, ಆಸಿಪ್ ಏ1,ನವಾಝ್,ಆಸಿಪ್,ಗಪೂರ್ ಅಮೀರ್, ಸುಹೈಲ್ ,ಅಹ್ಮದ್ ಬಾವಾಕ ,ಮನ್ಸೂರು,ಅಸ್ಫಾಕ್, ಅನ್ಸಾಪ್ ,ಸಿರಾಜ್ ಮುಂತಾದವರು ಉಪಸ್ಥಿತರಿದ್ದರು.
ಅಶ್ರಫ್ ಕಿನಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು






