ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ.) ರವರ 1500 ನೇ ಜನ್ಮದಿನಾಚರಣೆಯ ಪ್ರಯುಕ್ತ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇಲ್ಲಿ ಮೌಲೂದ್ , ಬುರ್ದಾ ಮತ್ತು ಸಂಸ್ಥೆಯ ಹಿಫ್ಲ್ , ಮದರಸ ಹಾಗೂ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಸೆಪ್ಟೆಂಬರ್ 22, 23 ರಂದು ನಡೆಯಿತು. ಕಾರ್ಯಕ್ರಮಕ್ಕೆ ಸಂಸ್ಥೆಯ ಉಪಾಧ್ಯಕ್ಷರಾದ ಮಹಮೂದ್ BA ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಎರಡು ದಿವಸಗಳ ಕಾರ್ಕ್ರಮದಲ್ಲಿ ಮಕ್ಕಳ ಸ್ಪರ್ದಾ ಕಾರ್ಯಕ್ರಮ ಮೌಲೂದ್ , ಬುರ್ದಾ, ದುಃವಾ ಮಜಲಿಸ್ ನಡೆಯಿತು. ದುಃವಾ ನೇತೃತ್ವವನ್ನು ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ಕಾಜೂರ್ ತಂಗಳ್ ನೀಡಿದರು.



ಕಾರ್ಯಕ್ರಮದಲ್ಲಿ ದಾರುಲ್ ಹಿಕ್ಮ ಕೇಂದ್ರ ಸಮಿತಿ ಸದಸ್ಯರು, ಸಂಸ್ಥೆಯ ಮುದರ್ರಿಸ್, ಸದರ್ , ಮುಹಲ್ಲಿಂ ರು , ಊರಿನ ಉಲಮಾ , ಉಮಾರ ನೇತಾರರು , ದಾರುಲ್ ಹಿಕ್ಮ ಯೂತ್ ವಿಂಗ್ ಸದಸ್ಯರು ಪಾಲ್ಗೊಂಡರು. ಕಾರ್ಯಕ್ರಮದ ಮೊದಲ ದಿನ ರಾತ್ರಿ ತಬರ್ರುಕ್ ವಿತರಣೆ ಹಾಗೂ ಎರಡನೇ ದಿನ ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲು ಎಲ್ಲಾ ವಿಧದ ತನು-ಮನ-ಧನ ಸಹಾಯ ವನ್ನು ದಾರುಲ್ ಹಿಕ್ಮ ಹಿತೈಷಿಗಳು, ದಾರುಲ್ ಹಿಕ್ಮ ಗಲ್ಫ್ ಕಮಿಟಿ , ದಾರುಲ್ ಹಿಕ್ಮ ಯೂತ್ ವಿಂಗ್, ಅಲ್ ಹಿಕ್ಮ ಅಲುಮ್ನಿ
ಊರಿನ ಹಿರಿಯರು, ಕಿರಿಯರು , ಮದರಸ, ಶಾಲಾ ಪೋಷಕರು ನೀಡಿದರು.






