ಪೈಗಂಬರ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ, ಅವರ ಪತ್ನಿ ಮತ್ತು ಸ್ವಹಾಬಿಗಳು, ಮದೀನಾದ ಕೆಲವು ಐತಿಹಾಸಿಕ ಬಾವಿಗಳು, ಮಸ್ಜಿದ್‌ಗಳು, ಇಸ್ಲಾಮಿನಲ್ಲಿ ಧರ್ಮ ಯುದ್ಧಗಳು, ನಾಲ್ಕು ಪ್ರಮುಖ ಇಮಾಮರುಗಳು, ಏಳರಷ್ಟು ಪ್ರವಾದಿಗಳು ಹಾಗೂ ಇರಾಕ್, ಈಜಿಪ್ಟ್ ಸಿರಿಯಾ, ಟರ್ಕಿ, ಫೆಲೆಸ್ಟೀನ್, ಜೋರ್ಡಾನ್, ಚೀನಾ ಮತ್ತು ನೈಜೀರಿಯಾ ಆಯ್ದ ದೇಶಗಳಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಲ್ಲಾಹನ ಸಜ್ಜನ ದಾಸರ ಜೀವನ ಚರಿತ್ರೆಯನ್ನು ಈ ಕೃತಿ ಪರಿಚಯಿಸುತ್ತಿದೆ.


1500 ನೇ ಮೀಲಾದುನ್ನಬಿ ದಿನದಂದು ಸೌದಿ ಅರೇಬಿಯಾ, ಶಾದುಲೀ ಜುಮಾ ಮಸ್ಜಿದ್ ಚಿಕ್ಕಮಗಳೂರು, ದಾರುಲ್ ಹುದಾ ತಂಬಿನಮಕ್ಕಿ, ಸುಳ್ಯ, ದಾರುಲ್ ಹುದಾ ಬೆಳ್ತಂಗಡಿ, ಅಶ್ಃಅರಿಯ್ಯಃ ಸುರಿಬೈಲ್‌ನಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡವು.
ಲೇಖಕ ಇಸ್ಹಾಕ್ ಸಿ.ಐ.ಫಜೀರ್ ಗಲ್ಫ್ ನಲ್ಲಿದ್ದುಕೊಂಡು ಬರೆದ ಮೂರನೇ ಕೃತಿಯಾಗಿದೆ ಇದು.






