janadhvani

Kannada Online News Paper

ಕೆಸಿಎಫ್ INC ಮುಖಂಡರಿಂದ ಮುಖ್ಯಮಂತ್ರಿ ಭೇಟಿ- ಅನಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಮನವಿ

ಅನಿವಾಸಿ ಸಚಿವಾಲಯ ಮತ್ತು ಸಚಿವರನ್ನು ನಿಯಮಿಸಿ ವಿದೇಶದಲ್ಲಿ ದುಡಿಯುವ ಯುವಕರನ್ನು ರಾಜ್ಯಕ್ಕೆ ಗುಣಾತ್ಮಕವಾಗಿ ಉಪಯೋಗಿಸಬೇಕು ಮತ್ತು ಅನಿವಾಸಿಗಳಿಗೆ ಅನಿವಾರ್ಯ ಸೇವೆಗಳನ್ನು ಒದಗಿಸಬೇಕು.

ಬೆಂಗಳೂರು: ಕರ್ನಾಟಕ ಕಲ್ಬರಲ್ ಫೌಂಡೇಶನ್ (KCF) ಅಂತಾರಾಷ್ಟ್ರೀಯ ಸಮಿತಿಯ ಉನ್ನತ ಮಟ್ಟದ ಪ್ರತಿನಿಧಿ ತಂಡವು ಜು.22 ರಂದು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಅನಿವಾಸಿ ಕನ್ನಡಿಗರ (NRKs) ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಿ, ಮನವಿಯನ್ನು ಸಲ್ಲಿಸಿತು.

ಈ ಪ್ರತಿನಿಧಿ ತಂಡದಲ್ಲಿ ಡಾ. ಇಕ್ಬಾಲ್ ಬರಕಾ (ಪ್ರಧಾನ ಕಾರ್ಯದರ್ಶಿ), ರೈಸ್ಕೋ ಹಾಜಿ (ಫೈನಾನ್ಸಿಯಲ್ ಕಂಟ್ರೋಲರ್) ಹಾಗೂ ಸಯ್ಯಿದ್ ಆಬಿದ್ ಅಲ್-ಹೈದರೂಸ್ (ಸಂಘಟನಾ ಕಾರ್ಯದರ್ಶಿ) ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾದ ಪ್ರಮುಖ ಮನವಿಗಳು:

1. ವಿದೇಶಗಳಲ್ಲಿ ಶಿಕ್ಷಣದ ಕೊರತೆಯ ಪರಿಹಾರ

ಇತ್ತೀಚಿನ ಕೆಲವು ವರ್ಷಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲಸುವ ಭಾರತೀಯ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಭಾರತೀಯ ಶಾಲೆಗಳ ಕೊರತೆ ಕಾಣುವುದರಿಂದ ಕರ್ನಾಟಕ ಸರಕಾರದ ವತಿಯಿಂದ ದೂತಾವಾಸದ ಸಹಕಾರದೊಂದಿಗೆ ಕೊಲ್ಲಿ ರಾಷ್ಟ್ರಗಳ್ಳಲ್ಲಿ (UAE, ಸೌದಿ, ಖತಾರ್) ಕನ್ನಡ ಮಾಧ್ಯಮ ಸಹಿತವಿರುವ ಶಾಲೆಗಳನ್ನು ಸರಕಾರ ಪ್ರಾರಂಭಿಸಿದ್ದಲ್ಲಿ ವಿದೇಶಿ ಕನ್ನಡಿಗರ ವಿದ್ಯಾಭ್ಯಾಸಕ್ಕೆ ಸಹಕಾರ ಆಗಲಿದೆ. ಕನ್ನಡವನ್ನು ಬೆಳೆಸುವ ಕಾರ್ಯಕ್ರಮಕ್ಕೂ ಉತ್ತೇಜನವಾಗಲಿದೆ. ಕನ್ನಡ ಮಾಧ್ಯಮವನ್ನು ಪ್ರೋತ್ಸಾಹಿಸುವ ಕರ್ನಾಟಕ ಸರಕಾರಕ್ಕೆ ಇದೊಂದು ಉತ್ತಮ ಅವಕಾಶವಾಗಿರುತ್ತದೆ.

2. ವೈದ್ಯಕೀಯ ಶಿಕ್ಷಣದಲ್ಲಿ ಸಮಾನ ಅವಕಾಶ

ಅನಿವಾಸಿಗಳಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಸ್ವದೇಶಿ ವಿದ್ಯಾರ್ಥಿಗಳಿಂದ 5 ಪಟ್ಟು ಹೆಚ್ಚು ಶುಲ್ಕ ಪಡೆಯಲಾಗುತ್ತಿದ್ದು ಈ ಮೂಲಕ ಅನಿವಾಸಿ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿಸಲಾಗುತ್ತಿದೆ ಇದಕ್ಕೆ ಸೂಕ್ತ ಪರಿಹಾರ ಬೇಕಾಗಿದೆ.

3. ತಾಂತ್ರಿಕ ನೈಪುಣ್ಯತೆ ಹೊಂದಿರುವ NRKsಗಳಿಗೆ ಉದ್ಯೋಗ ಮೀಸಲಾತಿ

ವಿದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ನೌಕರಿಯ ಸಾಧ್ಯತೆಗಳು ಕಡಿಮೆಯಾಗಿ ಬರುತ್ತಿರುದರಿಂದ ತಾಂತ್ರಿಕವಾಗಿ ನೈಪುಣ್ಯತೆ ಇರುವ ಕನ್ನಡಿಗರನ್ನು ಉಪಯೋಗಿಸುವ ಪ್ರಯುಕ್ತ ಕರ್ನಾಟಕ ಸರಕಾರಿ ನೌಕರಿಯಲ್ಲಿ ಅನಿವಾಸಿಗಳಿಗೆ ಮೀಸಲಾತಿ ನೀಡಬೇಕು.

4. ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ

ಅನಿವಾಸಿ ಸಚಿವಾಲಯ ಮತ್ತು ಸಚಿವರನ್ನು ನಿಯಮಿಸಿ ವಿದೇಶದಲ್ಲಿ ದುಡಿಯುವ ಯುವಕರನ್ನು ರಾಜ್ಯಕ್ಕೆ ಗುಣಾತ್ಮಕವಾಗಿ ಉಪಯೋಗಿಸಬೇಕು ಮತ್ತು ಅನಿವಾಸಿಗಳಿಗೆ ಅನಿವಾರ್ಯ ಸೇವೆಗಳನ್ನು ಒದಗಿಸಬೇಕು.

5. ದೂತಾವಾಸಗಳಲ್ಲಿ ಕನ್ನಡ ಅಧಿಕಾರಿಗಳ ನೇಮಕ

ಕೊಲ್ಲಿ ರಾಷ್ಟ್ರದ ಭಾರತ ದೂತಾವಾಸಗಳಲ್ಲಿ ಕನ್ನಡ ಅಧಿಕಾರಿಗಳನ್ನು ನಿಯಮಿಸಲು ವಿದೇಶ ಸಚಿವಾಲಯದೊಂದಿಗೆ ಒತ್ತಾಯಿಸಿ ನಿಯಮಿಸಬೇಕು.

6. ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ

ಕೊಲ್ಲಿ ರಾಷ್ಟ್ರಗಳಲ್ಲಿ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಬೇಡಿಕೆಯಿದ್ದು ಕರ್ನಾಟಕ ಸರಕಾರದ ಸಹಬಾಗಿತ್ವದಲ್ಲಿ IT’ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಬೇಕಾಗಿ ವಿನಂತಿಸುತ್ತಿದ್ದೇವೆ.

ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಯೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅಂತಾರಾಷ್ಟ್ರೀಯ ಸಮಿತಿಯ ಮುಖಂಡರು ಮನವಿ ಮಾಡಿದ್ದಾರೆ.