janadhvani

Kannada Online News Paper

ಸಮಾಜ ಸೇವೆಯಿಂದ ಸೃಷ್ಟಿಕರ್ತನ ಸಂತೃಪ್ತಿ- ಎಸ್‌ವೈ‌ಎಸ್ ಶಿಬಿರದಲ್ಲಿ ರಫೀಕ್ ಮಾಸ್ಟರ್

ದೇವನ ಆರಾಧನೆಯಿಂದ ಸ್ವರ್ಗ ಲಭ್ಯವಾದರೆ ದೇವನ ಸೃಷ್ಟಿಗಳಿಗೆ ಸೇವೆ ಸಲ್ಲಿಸುವುದರಿಂದ ಸೃಷ್ಟಿಕರ್ತನ ಸಂತೃಪ್ತಿಯನ್ನು ಪಡೆಯಲು ಸಾಧ್ಯ ಎಂದು ಪ್ರೇರಣಾ ಭಾಷಣಗಾರ ರಫೀಕ್ ಮಾಸ್ಟರ್ ಹೇಳಿದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಸಾಂತ್ವನ – ಸಮಾಜ ಸೇವಾ ಸನ್ನದ್ಧ ತಂಡ ‘ಇಸಾಬಾ’ದ ತರಬೇತಿ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

ಬಾವುಟ ಗುಡ್ಡೆ ಎಸ್‌ವೈ‌ಎಸ್ ಕಚೇರಿಯಲ್ಲಿ ನಡೆದ ಶಿಬಿರವನ್ನು ರಾಜ್ಯ ಉಪಾಧ್ಯಕ್ಷರಾದ ಇಬ್ರಾಹೀಂ ಖಲೀಲ್ ಮಾಲಿಕಿ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಉದ್ಘಾಟಿಸಿದರು.

ಖ್ಯಾತ ವಾಗ್ಮಿ ಅನಸ್ ಸಿದ್ದೀಖಿ ಬೆಂಗಳೂರು ತರಬೇತಿ ನೀಡಿದರು. ಕರೀಂ ಕದ್ಕಾರ್, ಯಾಕೂಬ್ ಸಅದಿ ನಾವೂರು ಮಾತನಾಡಿದರು.
ಕೋಶಾಧಿಕಾರಿ ಮನ್ಸೂರ್ ಅಲೀ ಶಿವಮೊಗ್ಗ, ನಾಯಕರಾದ ಇಬ್ರಾಹಿಂ ಸಖಾಫಿ ಪಯೋಟ,
ಅಹ್ಮದ್ ಮದನಿ ಮಡಿಕೇರಿ, ಮಹ್ಬೂಬ್ ಸಖಾಫಿ, ಅಬ್ದುಲ್ ರಹ್ಮಾನ್ ಹಾಜಿ ಪ್ರಿಂಟೆಕ್, ಇಸ್ಮಾಈಲ್ ಮಾಸ್ಟರ್ ಮರಿಕ್ಕಳ, ಶಾಫಿ ಸಅದಿ ಸೋಮವಾರಪೇಟೆ, ಅಬ್ದುರ್ರಹ್ಮಾನ್ ಹಾನಬಾಳ್ ಹಾಸನ, ರಿಯಾಝ್ ಕೋಡಿ ಕುಂದಾಪುರ, ಹುಸೈನ್ ಮುಸ್ಲಿಯಾರ್ ಬಾಳೆಹೊನ್ನೂರು ಮತ್ತಿತರರು ಉಪಸ್ಥಿತರಿದ್ದರು.