ಜಿದ್ದಾ: ಭಾರತದಿಂದ ಹತ್ತು ಸಾವಿರ ಜನರಿಗೆ ಅಲ್ಪಾವಧಿಯ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿದೆ. ಸಾಕಷ್ಟು ಅರ್ಜಿದಾರರಿದ್ದರೆ, ಲಾಟರಿ ಮೂಲಕ ಯಾತ್ರಿಕರನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ಯಾಕೇಜ್ ಮೂಲಕ 20 ದಿನಗಳಲ್ಲಿ ಹಜ್ ಪೂರ್ಣಗೊಳಿಸಿ ಮದೀನಾಕ್ಕೆ ಭೇಟಿ ನೀಡಿ ಮನೆಗೆ ಮರಳಲು ಅನುವು ಮಾಡಿಕೊಡುತ್ತದೆ.
ಕಳೆದ ಸೋಮವಾರ ಹಜ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಈ ಬಾರಿ, ಕಡಿಮೆ ಅವಧಿಯ ಹಜ್ ಆಯ್ಕೆಯನ್ನು ನೋಂದಣಿಯಲ್ಲಿ ಒಳಪಡಿಸಿದೆ. ಕೇಂದ್ರ ಹಜ್ ಸಮಿತಿಯು ಇದೀಗ ಸೀಟುಗಳ ಸಂಖ್ಯೆಯನ್ನು ಸ್ಪಷ್ಟಪಡಿಸಿದೆ. 20 ದಿನಗಳ ಹಜ್ ಪ್ಯಾಕೇಜ್‌ಗೆ 10,000 ಸೀಟುಗಳನ್ನು ಕಾಯ್ದಿರಿಸಲಾಗುವುದು. ಆದರೆ, ಹಜ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅರ್ಜಿದಾರರ ಸಂಖೈ ಹೆಚ್ಚಾದಲ್ಲಿ, ಅವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಾಟರಿಯಲ್ಲಿ ಅವಕಾಶ ಸಿಗದವರನ್ನು ಸಾಮಾನ್ಯ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ.
ಸಾಮಾನ್ಯ ವಿಭಾಗದಲ್ಲೂ ಹಜ್ ಯಾತ್ರೆಗೆ ಲಾಟರಿ ಮೂಲಕವೇ ಅವಕಾಶ ಕಲ್ಪಿಸಲಾಗುತ್ತಿದೆ. ಆದಾಗ್ಯೂ, ಮಹ್ರಮ್ ಇಲ್ಲದೆ ವಿಭಾಗದಲ್ಲಿ ಅರ್ಜಿ ಸಲ್ಲಿಸುವ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ, ಲಾಟರಿ ಇರುವುದಿಲ್ಲ. 65 ವರ್ಷಕ್ಕಿಂತ ಮೇಲ್ಪಟ್ಟ ಯಾತ್ರಿಕರೊಂದಿಗೆ ಸಹಾಯಕ ಕಡ್ಡಾಯವಾಗಿದೆ. ಭಾರತಕ್ಕೆ ಹಜ್ ಕೋಟಾವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಹಜ್ ಯಾತ್ರೆಗೆ ಈ ತಿಂಗಳ 31 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


