ಕುವೈಟ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಕುವೈತ್ ರಾಷ್ಟ್ರೀಯ ಸಮಿತಿ ವತಿಯಿಂದ ಹಿಜ್ರಾ ಸಂದೇಶ ಹಾಗೂ ಸಯ್ಯಿದ್ ಕೂರ ತಂಙಳ್ ಅನುಸ್ಮರಣೆ ಕಾರ್ಯಕ್ರಮವು ಜುಲೈ 4 ರಂದು ಸಂಜೆ 4:30ಕ್ಕೆ ಕುವೈಟ್ ಸಾಲ್ಮಿಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಆಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ,ಕೆಸಿಎಫ್ ಕುವೈಟ್ ಸಂಘಟನಾ ಕಾರ್ಯದರ್ಶಿ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರ ದುವಾದೊಂದಿಗೆ ಕೆಸಿಎಫ್ IC ನಾಯಕರಾದ ಜನಾಬ್ ಯಾಕೂಬ್ ಕಾರ್ಕಳ ಉದ್ಘಾಟನೆಗೈದರು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಮದಾಪುರ ಹಿಜರಿ ಸಂದೇಶ ನೀಡಿದರು. ಕೆಸಿಎಫ್ IC ಆಡಳಿತ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅನುಸ್ಮರಣೆ ಪ್ರಭಾಷಣ ನಡೆಸಿದರು.
ಕೆಸಿಎಫ್ ಕುವೈಟ್ ನೋರ್ತ್ ಝೋನ್ ಅಧ್ಯಕ್ಷರಾದ ಬಹುಮಾನ್ಯ ಕಾಸಿಂ ಉಸ್ತಾದ್ ಬೆಳ್ಮ, ಸೌತ್ ಝೋನ್ ಅಧ್ಯಕ್ಷರಾದ ಜನಾಬ್ ಹಸೈನಾರ್ ಮೊಂಟುಗೊಳಿ, ಫರ್ವಾನಿಯ ಸೆಕ್ಟರ್ ಅಧ್ಯಕ್ಷರಾದ ಜನಾಬ್ ಇಕ್ಬಾಳ್ ಎಡಪದವು,ಸಿಟಿ ಸೆಕ್ಟರ್ ಅಧ್ಯಕ್ಷರಾದ ಜನಾಬ್ ರಹೀಂ ಉಚ್ಚಿಲ, ಸಾಲ್ಮಿಯ ಸೆಕ್ಟರ್ ಅಧ್ಯಕ್ಷರಾದ ಜನಾಬ್ ಅನ್ವರ್ ಕುಂಜಾಲ್, ಫಾಹೀಲ್ ಸೆಕ್ಟರ್ ಕಾರ್ಯದರ್ಶಿ ಜನಾಬ್ ಅಬ್ದುಲ್ ಹಮೀದ್ ಮೂಳೂರ್ ಹಾಗೂ ಖೈತಾನ್ ಯುನಿಟ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಿಮಮಿ ಸಖಾಫಿ ಆಶಂಸಗೈದರು.ಈ ಸಂದರ್ಭದಲ್ಲಿ ಸಂಘಟನಾ ವಿಭಾಗದ ವತಿಯಿಂದ ಕೆಸಿಎಫ್ ಕುವೈಟ್ ಸದಸ್ಯರ ID ಕಾರ್ಡ್ ನ್ನು ಬಿಡುಗಡೆಗೊಳಿಸಲಾಯಿತು.
ಸಾಂತ್ವಾನ ವಿಭಾಗದ ಮಹತ್ತರವಾದ MRF ಯೋಜನೆಗೆ ಚಾಲನೆ ನೀಡಲಾಯಿತು. ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರು ನಶೀಹತ್ ಹಾಗೂ ದುಆ ನೆರವೇರಿಸಿದರು. ವೇದಿಕೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ,ಆಡಳಿತ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಫಾರೂಕ್ ಸಖಾಫಿ ಉಪಸ್ಥಿತರಿದ್ದರು.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಕಾರ್ಯದರ್ಶಿ ಜನಾಬ್ ಮುಸ್ತಫ ಉಳ್ಳಾಲ ಸ್ವಾಗತಿಸಿದರು.ಪಬ್ಲಿಕ್ ವಿಭಾಗದ ಅಧ್ಯಕ್ಷರಾದ ಜನಾಬ್ ಇಬ್ರಾಹಿಮ್ ವೇಣೂರ್ ಧನ್ಯವಾದಗೈದರು.
ಕೆಸಿಎಫ್ IC ಸಾಂತ್ವಾನ ಕಾರ್ಯದರ್ಶಿ ಜನಾಬ್ ಝಕರಿಯ್ಯಾ ಆನೆಕಲ್ ಕಾರ್ಯಕ್ರಮ ನಿರೂಪಣೆಗೈದರು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಜನಾಬ್ ಹೈದರ್ ಉಚ್ಚಿಲ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಿದರು.ಮುಹರ್ರಂ ತಿಂಗಳ ತಾಸೂಆಅ್ ಉಪವಾಸದ ಇಫ್ತಾರ್ ನ ವ್ಯವಸ್ಥೆ ಮಾಡಲಾಗಿತ್ತು.