*
ಉಡುಪಿಯ ನಿವಾಸಿ ಸಮೀರ್ ಮೊಹಮ್ಮದ್ ಖಾಸಿಂ ರವರು ದಿನಾಂಕ 19/06/2025 ರಂದು ಜಿದ್ದಾದಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಬನಿಮಲಿಕ್ ನಲ್ಲಿರುವ ಖಬರ್ ಸ್ಥಾನದಲ್ಲಿ ಕೆಸಿಎಫ್ ಜಿದ್ದಾ ಝೋನಿನ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು
ಅಂತ್ಯಕ್ರಿಯೆಗೆ ಬೇಕಾದ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳು ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಸೌದಿ ಅರೇಬಿಯಾದ ಕೆಸಿಎಫ್ ಶರಫಿಯ್ಯ ಸೆಕ್ಟರಿನ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಆರಿಫ್ ಉಚ್ಚಿಲ ರವರ ನೇತೃತ್ವದಲ್ಲಿ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಬಾಷಾ ಗಂಗಾವಳಿ , ಹಾಗೂ ಕಾರ್ಯದರ್ಶಿಯಾದ ಇಬ್ರಾಹಿಂ ಹಾಜಿ ಕಿನ್ಯ , ಸಹಿತ ಅನೇಕ ನಾಯಕರು ಸಹಕಾರದೊಂದಿಗೆ ನಡೆಯಿತು.
ಜಿದ್ದಾದ ಫೆಲೆಸ್ತೀನ್ನಲ್ಲಿರುವ ಜಾಮಿಯಾ ಮಸ್ಜಿದ್ ನಲ್ಲಿ 25-06-2025 ಫಜರ್ ನಮಾಜಿನ ಬಳಿಕ ಮಯ್ಯತ್ ನಮಾಝ್ ನಿರ್ವಹಿಸಿ ಬನಿಮಲಿಕ್ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.ಈ ಸಂದರ್ಭಲ್ಲಿ ಕೆಸಿಎಫ್ ಜಿದ್ದಾ ಝೋನಿನ ಅಧ್ಯಕ್ಷ ರಾದ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಲ್ ಉಚ್ಚಿಲ, ಪ್ರ.ಕಾರ್ಯದರ್ಶಿಯಾದ ಮನ್ಸೂರ್ ಕಾಟಿಪಳ್ಳ ,ಯಹ್ಯಾ ಬಿಳಿಯೂರ್ , ಹಾಗೂ ಸಹಪಾಠಿ ಗಳಾದ ಸಾದಿಕ್ ಹೈದರಾಬಾದ್, ತಾರಿಕ್ ,ಹಾಗೂ ಇಜಾಝ್ ಬಟ್ಕಳ್ ಸೇರಿದಂತೆ ಹಲವು ನಾಯಕರು, ಸಹಕಾರ್ಯಕರ್ತರು, ಹಾಗೂ ಸ್ಥಳೀಯರು ದಫನ ಕಾರ್ಯದಲ್ಲಿ ಸಹಕರಿಸಿದರು.