ಸಾಂಘಿಕ ಕ್ರಿಯಾಶೀಲತೆಯ ಕುರಿತು ಚರ್ಚಿಸುವ ಭಾಗವಾಗಿ ಎಸ್‌ವೈಎಸ್ ದ.ಕ ವೆಸ್ಟ್ ನಾಯಕರನ್ನು ಒಗ್ಗೂಡಿಸಿ ‘ಎಕ್ಸಿಕ್ಯೂಟಿವ್ ಕ್ಯಾಂಪ್’ ಜಿಲ್ಲಾಧ್ಯಕ್ಷರಾದ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ದಾರುಲ್ ಅಶ್ಅರಿಯ್ಯಾ ಸುರಿಬೈಲ್ ನಲ್ಲಿ ನಡೆಯಿತು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಪೀಣ್ಯ,ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಜ್ಯ ಉಪಾಧ್ಯಕ್ಷರಾದ ಇಲ್ಯಾಸ್ ತಂಙಳ್ ಅಲ್ ಹೈದ್ರೋಸಿ ಎಮ್ಮೆಮಾಡು ಹಾಗೂ ರಾಜ್ಯ ಕೋಶಾಧಿಕಾರಿ ಮನ್ಸೂರು ಅಲಿ ಕೋಟಗದ್ದೆ ತರಗತಿ ನಡೆಸಿದರು.
ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಖಲೀಲ್ ಮಾಲಿಕಿ, ರಾಜ್ಯ ಕಾರ್ಯದರ್ಶಿಗಳಾದ ಮಹಮ್ಮದಲಿ ಸಖಾಫಿ ಸುರಿಬೈಲ್, ಆಸಿಫ್ ಹಾಜಿ ಕೃಷ್ಣಾಪುರ, ರಾಜ್ಯ ನಾಯಕರಾದ ಅಹ್ಮದ್ ಮದನಿ ಕೊಡಗು, ಜಿಲ್ಲಾ ಕೋಶಾಧಿಕಾರಿ ರಝಾಕ್ ಭಾರತ್ ಮಂಚಿ, ಜಿಲ್ಲಾ ಉಪಾಧ್ಯಕ್ಷರಾದ ತೌಸೀಪ್ ಸಅದಿ ಹರೇಕಳ, ಯಾಕೂಬ್ ಸಅದಿ ನಾವೂರು, ಬದ್ರುದ್ಧೀನ್ ಅಝ್ಹರಿ ಕೈಕಂಬ, ನವಾಝ್ ಸಖಾಫಿ ಅಡ್ಯಾರ್, ನಝೀರ್ ಹಾಜಿ ವಳವೂರು, ಜಿಲ್ಲಾ ಕಾರ್ಯದರ್ಶಿಗಳಾದ ಮಹ್ಮೂದ್ ಸಅದಿ ಕುಕ್ಕಾಜೆ, ಮುತ್ತಲಿಬ್ ವೇಣೂರು, ಹಸನ್ ಪಾಂಡೇಶ್ವರ,ಫಾರೂಖ್ ಶೇಡಿಗುರಿ, ಖಾಲಿದ್ ಹಾಜಿ ಭಟ್ಕಳ ಹಾಗೂ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.
ಎಸ್‌ವೈಎಸ್ ದ.ಕ ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.