ದೋಹಾ : ಕಲೆ , ಸಂಸ್ಕೃತಿ ಮತ್ರು ಮೌಲ್ಯಗಳ ಸಮ್ಮಿಲನ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತರ್ ಸಮಿತಿ ವತಿಯಿಂದ ಪ್ರತಿಭೋತ್ಸವ 2k25 ದಿನಾಂಕ 13-06-2025 ರಂದು ಪುಣೆ ಯೂನಿವರ್ಸಿಟಿ ಸಭಾಂಗಣದ ಖುರ್ರತುಸ್ಸಾದಾತ್ ವೇದಿಕೆ ದೋಹಾದಲ್ಲಿ ನಡೆಯಿತು.
ಐಸಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಹಾಫಿಲ್ ಫಾರೂಕ್ ಸಖಾಫಿ ರವರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಮುನೀರ್ ಮಾಗುಂಡಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು, ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಸ್ವಾಗತಿಸಿದರು. ಅನ್ವಾರುಲ್ ಹುದಾ ಕೊಡಗು ಖತರ್ ಅಧ್ಯಕ್ಷರಾದ ಡಾ.ಸಯ್ಯದ್ ಹುಸೈನ್ ಖಾದ್ರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಸಿಎಫ್ ನಡೆಸುವ ಕಾರ್ಯಚಟುವಟಿಕೆಗಳು ಶ್ಲಾಘನೀಯವಾಗಿದ್ದು ಅನಿವಾಸಿ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೊಲ್ಲಿ ರಾಷ್ಟ್ರಗಳಾದ್ಯಂತ ಕೆ.ಸಿ.ಎಫ್ ಹಮ್ಮಿಕ್ಕೊಂಡ ಪ್ರತಿಭೋತ್ಸವವು ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಚರು.
ICBF ಖತರ್ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, KMCA ಅಧ್ಯಕ್ಷರಾದ ಸಾಕಿಬ್ ರಝಾ ಖಾನ್, ಕರ್ನಾಟಕ ಸಂಘ ಖತರ್ ಅಧ್ಯಕ್ಷರಾದ ರವಿ ಶೆಟ್ಟಿ , ICC ಮಾಜಿ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು, RSC ಖತರ್ ಅಧ್ಯಕ್ಷರಾದ ಉನೈಸ್ ಅಮಾನಿ, RSC Global Secretary ಮೊಯ್ದೀನ್ ಮಾಸ್ಟರ್, ICF ಖತರ್ ಅಧ್ಯಕ್ಷರಾದ ಅಹ್ಮದ್ ಸಖಾಫಿ ಪೆರಾಂಬರ , ಉದ್ಯಮಿ ಅಬ್ದುಲ್ಲಾ ಮೋನು ಮುಂತಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದ ಭಾಗವಾಗಿ ಕೆ.ಸಿ.ಎಫ್ ಮುಖವಾಣಿ ಗಲ್ಫ್ ಇಶಾರಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಕರ್ನಾಟಕ ಸಂಘ ಖತರ್ PRO ದಿನೇಶ್ ಗೌಡ, ಗೋಲ್ಡನ್ ಟ್ರೇಡಿಂಗ್ ಆಂಡ್ ಡೆಕೋರೇಷನ್ ಇದರ ಜನರಲ್ ಮ್ಯಾನೇಜರ್ ಅಸ್ಮತ್ ಅಲಿ , ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಖತ್ತರ್ ನಾಯಕರಾದ ಸುಲೈಮಾನ್ ಮುನ್ಕೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಭಾಗವಾಗಿ ಮಕ್ಕಳನ್ನೊಳಗೊಂಡ ವಿವಿಧ ಪ್ರತಿಭೆಗಳಿಂದ ಭಾಷಣ, ಹಾಡು, ಕ್ವಿಝ್, ಹಿಫ್ಳ್ ಖುರ್’ಆನ್, ಚರ್ಚಾಗೋಷ್ಠಿ, ದಫ್ ಎಂಬಿತ್ಯಾದಿ ಕಲಾ ವಿಭಾಗಗಳಲ್ಲಿ ನಡೆದ ಸ್ಪರ್ಧೆಯು ನೆರೆದಿರುವ ಅತಿಥಿಗಳು ಹಾಗೂ ಕಾರ್ಯಕರ್ತರಿಗೆ ವಿಶೇಷ ಮನರಂಜನೆಯಾಗಿತ್ತು. ವೈಯುಕ್ತಿಕ ಕಲಾ ಪ್ರತಿಭೆಯಾಗಿ ಆಸಿಫ್ ಅಹ್ಸನಿ ಕೊಡಗು (ವಕ್ರ ಝೋನ್) ಹಾಗೂ ಖಲೀಲ್ ಉರುಮಣೆ (ದೋಹಾ ಝೋನ್ ) ಹೊರಹೊಮ್ಮಿದರೆ, ಝೋನ್ ಗಳ ನಡುವೆ ನಡೆದ ಪೈಪೋಟಿಯ ಕಲಾ ಸ್ಪರ್ಧೆಯಲ್ಲಿ ವಕ್ರ ಝೋನ್ ಪ್ರಥಮ ಸ್ಥಾನಿಯಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮದೀನಾ ಖಲೀಫಾ ಝೋನ್ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ .
ಅಝೀಝಿಯ ಹಾಗೂ ದೋಹಾ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನವನ್ನು ಪಡೆಯಿತು .ಸಮಾರೋಪ ಸಮಾರಂಭದಲ್ಲಿ ಪ್ರತಿಭೋತ್ಸವ ಸಮಿತಿ ಚೇರ್ಮಾನ್ ಹನೀಫ್ ಪಾತೂರ್ ಸ್ವಾಗತಿಸಿ, ಪ್ರತಿಭೋತ್ಸವ ಸಮಿತಿ ಕನ್ವೀನರ್ ರಿಶಾದ್ ಮಧುವನ ವಂದಿಸಿದರು. ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗ ಕಾರ್ಯದರ್ಶಿ ಫಾರೂಖ್ ಜೆಪ್ಪು ಹಾಗೂ ಅಡ್ಮಿನ್ ವಿಭಾಗ ಕಾರ್ಯದರ್ಶಿ ಹಕೀಮ್ ಪಾತೂರು ರವರ ನಿಯಂತ್ರಣದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರತಿಭೋತ್ಸವ ಸಮಿತಿ ಜೊತೆ ಕನ್ವೀನರ್ ಝಕರಿಯ್ಯಾ ಸಮ್ಜಾದ್ ಕಾರ್ಯಕ್ರಮ ನಿರೂಪಿಸಿದರು.