ವಾಷಿಂಗ್ಟನ್ | ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ ಪ್ರವೇಶಿಸಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಬೇಷರತ್ತಾಗಿ ಶರಣಾಗತರಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಾಮಿನೈ ಎಲ್ಲಿ ಅಡಗಿದ್ದಾರೆಂಬ ನಿಖರ ಮಾಹಿತಿ ನಮಗಿದೆ. ಅವರನ್ನು ಮುಗಿಸುವ ಉದ್ದೇಶವಿಲ್ಲ, ಆದರೆ ಇರಾನ್ ಬೇಷರತ್ತಾಗಿ ಶರಣಾಗತರಾಗಬೇಕು ಎಂದು ತಮ್ಮದೇ ಆದ ಸಾಮಾಜಿಕ ಮಾಧ್ಯಮ ಸಂಸ್ಥೆ ಟೂತ್ ಸೋಷಿಯಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಎಕ್ಸ್ ಖಾತೆ ಟೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್,”ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವವರು ಎಲ್ಲಿ ಅಡಗಿದ್ದಾರೆಂದು ನಮಗೆ ನಿಖರವಾಗಿ ತಿಳಿದಿದೆ. ಅವರನ್ನು ಗುರಿಯಾಗಿಸುವುದು ಸುಲಭ, ಆದರೆ ಅಲ್ಲಿ ಸುರಕ್ಷಿತರಾಗಿದ್ದಾರೆ. ನಾವು ಅವರನ್ನು ಕೊಲ್ಲಲು ಹೋಗುವುದಿಲ್ಲ. ಆದರೆ ನಾಗರಿಕರು ಅಥವಾ ಅಮೆರಿಕನ್ ಸೈನಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ತಾಳ್ಮೆ ಕ್ಷೀಣಿಸುತ್ತಿದೆ” ಎಂದು ಹೇಳಿದರು.
ಇರಾನ್‌ನ ಆಕಾಶದ ಮೇಲೆ ನಮಗೆ ಸಂಪೂರ್ಣ ನಿಯಂತ್ರಣವಿದೆ. ಇರಾನ್‌ನಲ್ಲಿ ಸಾಕಷ್ಟು ಉತ್ತಮ ಸ್ಕೈ ಟ್ರ್ಯಾಕರ್‌ಗಳು ಮತ್ತು ಇತರ ರಕ್ಷಣಾ ಸಾಧನಗಳಿತ್ತು. ಆದರೆ ಅದು ಅಮೆರಿಕ ನಿರ್ಮಿಸಿದ್ದಕ್ಕಿಂತ ಉತ್ತಮವಾದುದಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಟ್ರಂಪ್ ಅವರ ಪ್ರತಿಕ್ರಿಯೆಯನ್ನು ಅಮೆರಿಕ, ಇರಾನ್ ಇಸ್ರೇಲ್ ನಡುವಿನ ಯುದ್ಧಕ್ಕೆ ಪ್ರವೇಶಿಸುತ್ತಿದೆ ಎಂಬುದು ಗಮನಾರ್ಹ.