janadhvani

Kannada Online News Paper

ಮುಹಮ್ಮದ್ ಜಂಶೀರ್ ರಿಯಾದ್ ನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್

ರಿಯಾದಿನಲ್ಲಿ ಮರಣ ಹೊಂದಿದ ಮುಹಮ್ಮದ್ ಜಂಶೀರ್ ಉಜಿರೆಯವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ನೇತೃತ್ವದಲ್ಲಿ ನಡೆಸಲಾಯಿತು.

ಮರಣ ಹೊಂದಿದ ಮಾಹಿತಿ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ನಾಯಕರು ಆಸ್ಪತ್ರೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.

ನಂತರ ಕರ್ನಾಟಕ ಕಲ್ಚರಲ್ ಫೌಂಡೇಶನ್ ನಾಯಕರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ .

ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ ಅಂತ್ಯಕ್ರಿಯೆಗೆ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳನ್ನು ಮಾಡಬೇಕಾಗಿದ್ದು, ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ರಿಯಾದ್ ರಾಷ್ಟ್ರೀಯ ನಾಯಕರಾದ ಹನೀಫ್ ಕಣ್ಣೂರು, ಸೌದಿ ರಾಷ್ಟ್ರೀಯ ಸಾಂತ್ವನ ಇಲಾಖೆ ‌ಅಧ್ಯಕ್ಷರಾದ ಭಾಷಾ ಗಂಗಾವಳಿ ಮೃತರ ಕುಟುಂಬಸ್ಥರಾದ ಹಕೀಂ ಉಸ್ಮಾನ್, ಮುಹಮ್ಮದ್ ಶರೀಫ್, ಝನೀತ್, ನಝೀರ್ ಅತ್ತಾಜೆ ಹಾಗೂ ಇನ್ನಿತರರು ಮುಂಚೂಣಿಯಲ್ಲಿದ್ದುಕೊಂಡು ಎಲ್ಲಾ ಕಾರ್ಯಗಳನ್ನು ಯಾವುದೇ ಕುಂದುಕೊರತೆಗಳಿಲ್ಲದಂತೆ ಚೆನ್ನಾಗಿ ನಿಭಾಯಿಸಿದ್ದಾರೆ. ಊರಿನಲ್ಲಿ ಮೃತರ ಕುಟುಂಬಸ್ಥರು ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ.

ರಿಯಾದಿನ ಅಲ್ ರಾಜಿ ಮಸ್ಜಿದ್‌ನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ಅಲ್-ನಸೀಮ್ ಸಾರ್ವಜನಿಕ ದಫನ ಸ್ಥಳದಲ್ಲಿ ನಡೆದ ದಫನ್ ಕಾರ್ಯದ ನೇತೃತ್ವವವನ್ನು ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಹಂಝ ಉಸ್ತಾದ್ ಚೋಕ‌ಂಡಳ್ಳಿ ಕೊಡಗು, Pk ದಾವೂದ್ ಸ‌ಅದಿ  ವಹಿಸಿದ್ದರು. ಜಲಾಲ್ ಸ‌ಅದಿ, ಸಿದ್ದೀಕ್ ಬಾಳೆಹೊನ್ನೂರು, ಹನೀಫ್ ಕಣ್ಣೂರು, ಅನ್ಸಾರ್ ಕೈಕಂಬ ಸೇರಿದಂತೆ ಕೆಸಿಎಫ್ ರಾಷ್ಟ್ರೀಯ, ಝೋನ್ ನಾಯಕರು, ಕಾರ್ಯಕರ್ತರು, ಮೃತರ ಕುಟುಂಬಸ್ಥರು, ಗೆಳೆಯರು, ಸಹೋದ್ಯೋಗಿಗಳು ಹಾಗೂ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೃತರು ಕುಟುಂಬಸ್ಥರು  ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.