janadhvani

Kannada Online News Paper

ಬೆಳ್ತಂಗಡಿ SჄS ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ಪ್ರೌಡ ಸಮಾಪ್ತಿ

ಬೆಳ್ತಂಗಡಿ: ಜೂನ್ 15 SჄS ಬೆಳ್ತಂಗಡಿ ಝೋನ್ ಸಮಿತಿಯಿಂದ ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ನಿನ್ನೆ ಸಂಜೆ 6 ಗಂಟೆಗೆ ಸರಿಯಾಗಿ FM ಗಾರ್ಡನ್ ಗುರುವಾಯನಕೆರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದತ್ ಬಾ ಅಲವಿ ತಂಞಳ್ ಉಲ್ತೂರು ಉದ್ಘಾಟಿಸಿದರು.

SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಬಹು ಅಬ್ದುರ್ರಹ್ಮಾನ್ ಸಖಾಫಿ ಆಲಂದಿಲ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು. ಆಧ್ಯಾತ್ಮಿಕ ನೇತ್ರತ್ವ ಹಾಗೂ ದುಆ ಮಜ್ಲಿಸ್ ಬಹು ಅಸ್ಸಯ್ಯಿದ್ ಜಲಾಲುದ್ದೀನ್ ತಂಞಳ್ ಅಲ್ ಹಾದಿ ಮಲ್‌ಜಹ್‌ ನೇತೃತ್ವ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ
ಬಹು ತ್ವಾಹಿರ್ ಸಖಾಫಿ ಉಸ್ತಾದ್ ಮಂಜೇರೀ ಕೇರಳ ಇವರು “ಸ್ಮಾರ್ಟ್ ಲೀಡರ್ಸ್” ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು. ಸಂಘಟನೆಯ ಜವಾಬ್ದಾರಿ ಎಂಬ ವಿಷಯದಲ್ಲಿ
SჄS ಈಸ್ಟ್ ಜಿಲ್ಲಾ ಅಧ್ಯಕ್ಷರು ಬಹು ಅಶ್ರಫ್ ಸಖಾಫಿ ಮಾಡಾವು ಸವಿಸ್ತಾರವಾಗಿ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಯುನಿಟ್ ,ಸರ್ಕಲ್ ಪದಾಧಿಕಾರಿಗಳು ಹಾಗೂ ಝೋನ್ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರೂ ಸರಿ ಸುಮಾರು 300 ಕ್ಕೂ ಅಧಿಕ ನಾಯಕರು ಭಾಗವಹಿಸದ್ದರು.
ಕಾರ್ಯಕ್ರಮದ ಪ್ರಾರಂಭಕ್ಕೆ ಬದ್ರ್ ಶುಅದಾಕಳ ಹೆಸರಲ್ಲಿ ಮೌಲೀದ್ ಪಾರಾಯಣ ನಡೆಯಿತು ಝೋನ್ ಕೋಶಾಧಿಕಾರಿ ಬಹು ರಝಾಕ್ ಸಖಾಫಿ ಮಡಂತ್ಯಾರು ನೇತೃತ್ವ ವಹಿಸಿದ್ದರು

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬದ್ರುದ್ದೀನ್ ಅಲ್ ಹಾದಿ ತಂಙಳ್ ಮದನಿ ಪೊಮ್ಮಾಜೆ, SჄS ರಾಜ್ಯ ಕಾರ್ಯದರ್ಶಿ ಬಹು ಹಂಝ ಮದನಿ ಉಸ್ತಾದ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಲ್ಲಾ ಕೋಶಾಧಿಕಾರಿ ಶಾಫಿ ಸಖಾಫಿ ಪಟ್ಟೂರು ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯಾಧ್ಯಕ್ಷರು ಉಮರ್ GK , ಸಿದ್ದೀಕ್ JH ವಕ್ಫ್ ಸಲಹಾ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆ SSF ರಾಜ್ಯ ಕಾರ್ಯದರ್ಶಿ ರಶೀದ್ ಮಡಂತ್ಯಾರು,ಡಿವಿಷನ್ ಅಧ್ಯಕ್ಷರಾದ ಇಸ್‌ಹಾಖ್ ಅಳದಂಗಡಿ,ಪ್ರದಾನ ಕಾರ್ಯದರ್ಶಿ ನಾಸಿರ್ ಪದ್ದಂಡಡ್ಕ ಭಾಗವಹಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ SჄS ಬೆಳ್ತಂಗಡಿ ಝೋನ್ ಪ್ರದಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿ ಕೊನೆಯಲ್ಲಿ ಝೋನ್ ಸಂಘಟನಾ ಕಾರ್ಯದರ್ಶಿ ಜಮಾಲುದ್ದೀನ್ ಲತೀಫೀ ಲಾಡಿ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯ.