janadhvani

Kannada Online News Paper

ಕೂರತ್ ತಂಙಳ್ ಉರೂಸ್: ಇಲಾಖಾ ಅಧಿಕಾರಿಗಳಿಂದ ಸಿದ್ಧತಾ ಸಭೆ- ಸ್ಪೀಕರ್ ಹಾಗೂ ಶಾಸಕರು ಭಾಗಿ

ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ಪ್ರಥಮ ಉರೂಸ್ ಸಮಾರಂಭವು 2025-ಜೂನ್ 26 ರಿಂದ 29ರ ವರೆಗೆ ನಡೆಯಲಿದೆ.

ಪುತ್ತೂರು,ಜೂ.14: ಆಧ್ಯಾತ್ಮಿಕ ನಾಯಕರಾಗಿ, ನೂರಾರು ಮೊಹಲ್ಲಾಗಳ ಖಾಝಿಗಳಾಗಿದ್ದುಕೊಂಡು ನಾಯಕತ್ವ ನೀಡಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ಪ್ರಥಮ ಉರೂಸ್ ಸಮಾರಂಭವು 2025-ಜೂನ್ 26 ರಿಂದ 29ರ ವರೆಗೆ ನಡೆಯಲಿದೆ.

ಕೂರತ್ ತಂಙಳ್ ಉರೂಸ್ ಸಮಾರಂಭದಲ್ಲಿ ಲಕ್ಷಾಂತರ ಜನರು ಭಾಗಿಯಾಗುವ ಸಾಧ್ಯತೆಯಿದ್ದು, ಈ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆಯು ಇಂದು ಕೂರತ್ ನಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹಾಗೂ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಪಾಲ್ಗೊಂಡಿದ್ದರು.

ಇದೇ ವೇಳೆ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು ಕರಾವಳಿಯಲ್ಲಿ ಇತ್ತೀಚೆಗೆ ಕೆಲವೊಂದು ಅಹಿತಕರ ಘಟನೆಗಳು ನಡೆದಿದೆ. ಇದು ಮರುಕಳಿಸದಂತೆ ಕರಾವಳಿಯ ಜನತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಮನವಿ ಮಾಡಿದರು.

ಪುತ್ತೂರು, ಕಡಬ ತಾಲೂಕಿನ ಆರಕ್ಷರ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿ ಸುಮಾರು 17 ರಷ್ಟು ಇಲಾಖೆಗಳ 50 ಕ್ಕೂ ಮಿಕ್ಕ ಅಧಿಕಾರಿಗಳು ಸಭೆಯಲ್ಲಿ ಹಾಜರಾಗಿದ್ದರು.