janadhvani

Kannada Online News Paper

ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ

ಕಬಕ : ಸರಕಾರಿ ಪ್ರೌಢಶಾಲೆ ಕಬಕದಲ್ಲಿ ಗಲ್ಫ್ ಯೂತ್ಸ್ ಕಬಕ ಜಮಾಅತ್ ಇದರ ಆಶ್ರಯದಲ್ಲಿ ಪ್ರೌಢ ಶಾಲಾ ಅಧ್ಯಾಪಕ ವೃಂದ ಮತ್ತು ಅಧ್ಯಾಪಿಕೆ ಡಾ.ಶಾಂತ ರವರಿಗೆ ,ಮತ್ತು ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿ ಗಳಿಗೆ ಪ್ರೇರಣಾ ಕಾರ್ಯಕ್ರಮ ಬುಧವಾರ ನಡೆಯಿತು.

ಅದ್ಯಾಪಕಿ ಬಹುಮುಖ ಪ್ರತಿಭೆ ನೆಲೆಯಲ್ಲಿ ಶಿಕ್ಷಕಿ ಡಾ.ಶಾಂತಾ ರವರನ್ನು ಗಲ್ಫ್ ಯೂತ್ಸ್ ಕಬಕ ಜಮಾಅತ್ ವತಿಯಿಂದ ಗೌರವಿಸಲಾಯಿತು. ಹಾಗೂ ಎಸ್ .ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದ ಪೂಜಾಶ್ರೀ,ಫಲಕನಾಝ್,ಸವಿತಾ ಲಮಾಣಿಯವರನ್ನು ಗೌರವಿಸಲಾಯಿತು. ಶಾಲೆಗೆ ಉತ್ತಮ ಫಲಿತಾಂಶ ದೊರೆತು ಎ.ಗ್ರೇಡ್ ಪಡೆದ ನೆಲೆಯಲ್ಲಿ ಎಲ್ಲಾ ಅಧ್ಯಾಪಕ ವೃಂದದ ಪರವಾಗಿ ಮುಖ್ಯ ಶಿಕ್ಷಕಿ ಸುರೇಖರವರನ್ನು ಗೌರವಿಸಲಾಯಿತು.

ಹಾಜಿ ಬಶೀರ್ ಕಬಕ ರವರು ಮಾತಾಡಿ,ಇದೆ ಕಬಕ ಶಾಲೆಯ ಹಳೆ ವಿದ್ಯಾರ್ಥಿಯಾಗಿ ದುಬೈ ನ ಉನ್ನತ ಸಂಸ್ಥೆಯಲ್ಲಿ ಉದ್ಯೋಗಿ ಯಾಗಿರಲು ಇದೆ ವಿದ್ಯಾದೇಗುಲದಲ್ಲಿ ಕಲಿತದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.ಗೌರವ ಡಾಕ್ಟರೇಟ್ ಪಡೆದ ಡಾ. ಶಾಂತರವರ ಸಾಧನೆಯನ್ನು,ಅದೇ ರೀತಿ ಅತ್ತುತ್ತಮ SSLC ಪಲಿತಾಂಶಕ್ಕಾಗಿ ಆ ವಿದ್ಯಾರ್ಥಿಗಳನ್ನು ಮತ್ತು ಎಲ್ಲಾ ಅಧ್ಯಾಪಕ ವೃಂದವನ್ನು ಅಭಿನಂದಿಸಿದರು.
ಮತ್ತು ಫಾರೂಕ್ ತವಕ್ಕಲ್ ರವರು ಮಾತಾಡಿ ವಿದ್ಯಾರ್ಥಿಗಳಿಗೆ ಮುಂದೆ 100% ಪಲಿತಾಂಶವು ಪಡೆಯಲು ಬೇಕಾದ ಸಹಕಾರವನ್ನು ನಾವು ನೀಡುತ್ತೇವೆ, ಉತ್ತಮ ಪಲಿತಾಂಶದ ಅತ್ತುತ್ತಮ ಅಂಕದ ಹೆಚ್ಚಿನ ಉಪಯೋಗ ಮುಂದಕ್ಕೆ ವಿದ್ಯಾರ್ಥಿಗಳಿಗೆ ಹೊರತು ಇನ್ಯಾರಿಗೂ ಅಲ್ಲ.ಆದ್ದರಿಂದ ಮಾದಕ ವ್ಯಸನದಂಥ ಕೆಟ್ಟ ಚಟಕ್ಕೆ ಬಲಿ ಬೀಳದೆ ಮುಂದೆ ಕಲಿತು ಉನ್ನತ ಸ್ಥಾನಕ್ಕೆ ವಿದ್ಯಾರ್ಥಿಗಳು ಏರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶರೀಫ್ ಅಹ್ಮದ್ ಕಬಕ ಸಾರಥ್ಯದ ಗಲ್ಫ್ ಯೂತ್ಸ್ ಕಬಕ ಇದರ ಅತ್ಯಂತ ಉಪಯುಕ್ತವಾದ ಹಾಗೂ ಪರಿಣಾಮಕಾರಿಯಾದ ಈ ನೂತನ ಕಾರ್ಯಕ್ರಮ ಪರಿಚಯಿಸಿದ್ದಕ್ಕಾಗಿ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸಿಬ್ಬಂದಿ ವರ್ಗ ಗಲ್ಫ್ ಯೂತ್ ಸರ್ವ ಸದಸ್ಯರನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಈ ಹಿಂದೆ ಶಾಲೆಯ ವಿವಿಧ ಕಾರ್ಯಕ್ರಮಗಳಿಗೆ ಸಹಕರಿಸಿದ್ದನು ಸ್ಮರಿಸಿ ಸಂಘಟನೆಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಗಲ್ಫ್ ಯೂತ್ಸ್ ಕಬಕ ಜಮಾಅತ್ ಸಂಚಾಲಕರಾದ ಇಸ್ಮಾಯಿಲ್ ಬಗ್ಗುಮೂಲೆ, ಗೌವಾದ್ಯಕ್ಷ ಮಹಮ್ಮದ್ ಬೊಳುವಾರು,SDMC ಮತ್ತು ಸ್ಥಳೀಯ ಪಂಚಾಯತ್ ಪ್ರತಿನಿಧಿ ಶಾಬಾ ಕೆ ,ಗಲ್ಫ್ ಯೂತ್ ಪ್ರಮುಖ್ ಮತ್ತು ಸಲಹೆಗಾರರಾದ ಬಶೀರ್ ಹಾಜಿ, ಇಸ್ಮಾಯಿಲ್ ಬ್ರೈಟ್, ರಫೀಕ್ ಬ್ರೈಟ್ ಪೋಲ್ಯ,ಗಲ್ಫ್ ಲೋಕಲ್ ಸಂಯೋಜಕರಾದ ಅಬ್ಬುಲ್ ಖಾದರ್ ಭಾರತ್,ಗಲ್ಫ್ ಲೋಕಲ್ ಸದಸ್ಯ ರಾದ ಫಾರೂಕ್ ತವಕಲ್ ಗಲ್ಫ್ ಯೂತ್ ಸದಸ್ಯರುಗಳಾದ ಅಶ್ರಫ್ ಯುನೈನ್ , ಅಬ್ದುಲ್ ರಜಾಕ್, ಶೌಕತ್ ಆಲಿ, ಹಾರಿಸ್ ದಿಲ್,ಶಾಲಾ ಸ್ಥಾಯಿ ಸಮಿತಿ ಸದಸ್ಯರಾದ ಪ್ರಶಾಂತ್ ಮುರ ಉಪಸ್ಥಿತರಿದ್ದರು.
ಶಿಕ್ಷಕರಾದ ಉದಯ ಎಸ್. ಸ್ವಾಗತಿಸಿದರು. ಯಶೋಧ ಸನ್ಮಾನಿತರ ಪರಿಚಯ ಮಾಡಿದರು.ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಯ್ಯ ಕೆ.ಧನ್ಯವಾದವಿತ್ತರು.ಸ್ವಪ್ನ ಸಹಕರಿಸಿದರು.