ರಿಯಾದ್: ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಸೌದಿ ಅರೇಬಿಯಾದ ಸರ್ಕಾರಿ ಮೂಲಗಳು ತಿಳಿಸಿವೆ. ಸೌದಿ ಅರೇಬಿಯಾ ಭಾರತೀಯರ ಮೇಲೆ ಪ್ರಯಾಣ ನಿಷೇಧ ಹೇರಿದೆ ಎಂಬ ವರದಿ ಆಧಾರರಹಿತವಾಗಿದೆ. ಹಜ್ ಸಮಯದಲ್ಲಿ ಅಲ್ಪಾವಧಿಯ ವೀಸಾಗಳ ಮೇಲೆ ಸಾಮಾನ್ಯವಾಗಿ ನಿರ್ಬಂಧ ಹೇರಲಾಗುತ್ತದೆ ಎಂದು ಅಧಿಕೃತರು ಸ್ಪಷ್ಟಪಡಿಸಿದ್ದಾರೆ.
ಹಜ್‌ಗೆ ಸಂಬಂಧಿಸಿದಂತೆ ಬಿಡುಗಡೆಯಾದ ಹೊಸ ಅಪ್ಡೇಟ್ ನಲ್ಲಿ, ಸೌದಿ ಅರೇಬಿಯಾ ಭಾರತ ಸೇರಿದಂತೆ 14 ದೇಶಗಳ ನಾಗರಿಕರಿಗೆ ಬ್ಲಾಕ್ ವರ್ಕ್ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿತ್ತು. ಈ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಬಂದಿದೆ. ಬಾಂಗ್ಲಾದೇಶ, ಭಾರತ, ಈಜಿಪ್ಟ್, ಇಂಡೋನೇಷ್ಯಾ, ನೈಜೀರಿಯಾ, ಲೈಬೀರಿಯಾ, ಯೆಮೆನ್, ಕೀನ್ಯಾ ಮತ್ತು ಟರ್ಕಿ ಸೇರಿದಂತೆ ದೇಶಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ವರದಿಗಳು ಬಂದಿದೆ.