ಸಾಮಾಜಿಕ ಜಾಲ ತಾಣ ವಾಟ್ಸಾಪ್ ನಲ್ಲಿ ಬಂದ ಸಂದೇಶವನ್ನು ಇನ್ನೊಂದು ವಾಟ್ಸಾಪ್ ಗ್ರೂಪ್ ಗೆ ರವಾನಿಸಿದ್ದಾರೆ ಎನ್ನುವ ಕಾರಣಕ್ಕಾಗಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕಿನಾರ ರವರ ಮೇಲೆ ಕೇಸ್ ದಾಖಲಾಯಿಸಿದ ಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಸಮುದಾಯಕ್ಕೆ ಅನ್ಯಾಯವಾದಾಗ ಸರಕಾರದ ನಡೆಯನ್ನು ವಿವಿಧ ರೀತಿಯಲ್ಲಿ ಟೀಕಿಸಿ , ವಿರೋಧ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಇದಕ್ಕಾಗಿ ರವಾನಿಸಿದ ವಾಟ್ಸಾಪ್ ಸಂದೇಶವನ್ನು ನೆಪವಾಗಿ ಅಶ್ರಫ್ ಕಿನಾರ ಮೇಲೆ ಕೇಸು ದಾಖಲಿಸಿರುವ ಕ್ರಮ ಅತ್ಯಂತ ಖಂಡನೀಯ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ:ಮುಹಮ್ಮದ್ ಫಾಝಿಲ್ ರಝ್ವೀ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಇಬ್ರಾಹಿಂ ಮದನಿ ತಿಳಿಸಿದ್ದಾರೆ.