ರಿಯಾದ್: ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಬಿಷಾ ನಜಿಯಾದಲ್ಲಿ ಕಾಸರಗೋಡು ಮೂಲದ ಬಶೀರ್(41) ಎಂಬವರನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ರಿಯಾದ್‌ನಿಂದ ಇಬ್ಬರು ಸ್ಥಳೀಯರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದ್ದು. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ.
ಕಾಸರಗೋಡು ಬಂದಡುಕ್ಕ ಏಣಿಯಾಡಿಯ ಮುಹಮ್ಮದ್ ಮತ್ತು ಮರಿಯುಮ್ಮ ದಂಪತಿಯ ಪುತ್ರ ಎ.ಎಂ. ಬಶೀರ್ ಅವರನ್ನು ರವಿವಾರ ಮಧ್ಯರಾತ್ರಿ ವೇಳೆ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಕಳೆದ 13 ವರ್ಷಗಳಿಂದ ಸೌದಿ ಅರೇಬಿಯಾದ ಬಿಶಾ ಪ್ರದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಷೀರ್, ತಮ್ಮ ನಿವಾಸದ ಬಳಿ ಟ್ಯಾಕ್ಸಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ದಾಳಿ ನಡೆದಿತ್ತು. ಮೃತದೇಹವನ್ನು ಬಿಷಾದಲ್ಲಿರುವ ಮಲಿಕ್ ಅಬ್ದುಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.