ಕುವೈತ್ ಸಿಟಿ | ಕುವೈತ್‌ನ ಅಲ್-ರಿಗ್ಗಾದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಕಟ್ಟಡದಲ್ಲಿರುವ ಒಂದು ಅಪಾರ್ಟೆಂಟ್ನಲ್ಲಿ ಬೆಂಕಿ ಪ್ರಾರಂಭಗೊಂಡಿದೆ. ಅದು ಬೇಗನೆ ಹತ್ತಿರದ ಮತ್ತೊಂದು ಕಟ್ಟಡಕ್ಕೂ ಹರಡಿತು. ಶುವೈಖ್ ಕೈಗಾರಿಕಾ ಮತ್ತು ಆರ್ದಿಯಾ ಕೇಂದ್ರಗಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಮೃತಪಟ್ಟವರ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ತನಿಖೆಗಾಗಿ ಸ್ಥಳವನ್ನು ಸಂಬಂಧಿತ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಕಟ್ಟಡ ಮಾಲೀಕರು ಮತ್ತು ಇತರ ಅಧಿಕೃತರು ಸುರಕ್ಷತೆ ಮತ್ತು ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಜನರಲ್ ಫಯರ್ ಫೋರ್ಸ್ ಪಬ್ಲಿಕ್ ರಿಲೇಶನ್ಸ್ ಆಂಡ್ ಮೀಡಿಯಾ ಡಿಪಾರ್ಟ್‌ಮೆಂಟ್ ವಿನಂತಿಸಿದೆ.