janadhvani

Kannada Online News Paper

ಕೆಸಿಎಫ್ ಸೌದಿ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ-25 ಕಾರ್ಯಕ್ರಮಕ್ಕೆ ಪ್ರೌಢ ಸಮಾಪ್ತಿ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು 2025 ಮೇ 30 ಹಾಗೂ 31ನೇ ತಾರೀಖಿನಂದು ಝೂಮ್ ಆನ್ಲೈನ್‌ ಮೂಲಕ ಬಹಳ ಯಶಸ್ವಿಯಾಗಿ ನಡೆಯಿತು.

ಕಲೆ, ಸಂಸ್ಕೃತಿ ಮತ್ತು ಮೌಲ್ಯಗಳ ಸಮ್ಮಿಲನ ಎಂಬ ಶೀರ್ಷಿಕೆಯೊಂದಿಗೆ ಕೆಸಿಎಫ್ ಇದರ ಎಲ್ಲಾ ಸದಸ್ಯತ್ವ ರಾಷ್ಟ್ರಗಳಲ್ಲಿ ಪ್ರತಿಭೋತ್ಸವವು ನಡೆದು ಅಂತಿಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿರುವ ಮದೀನಾ, ಜಿದ್ದಾ, ರಿಯಾದ್, ದಮ್ಮಾಮ್, ಅಲ್-ಕಸೀಮ್ ಹಾಗೂ ಜುಬೈಲ್ ಝೋನ್ ನಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗಳನ್ನೊಳಗೊಂಡಾಗಿದೆ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು ನಡೆದಿರುವುದು.

ಸೀನಿಯರ್ ಹಾಗೂ ಜನರಲ್ ಎಂಬ ಎರಡು ವಿಭಾಗದಲ್ಲಿ ಒಟ್ಟು 22 ಸ್ಪರ್ಧೆಗಳು ಈ ಪ್ರತಿಭೋತ್ಸವದಲ್ಲಿ ಒಳಗೊಂಡಿತ್ತು. ಎಲ್ಲಾ ಸ್ಪರ್ಧೆಗಳ ಫಲಿತಾಂಶಗಳ ಬಳಿಕ ಸೀನಿಯರ್ ವಿಭಾಗದ ವೈಯುಕ್ತಿಕ ಚಾಂಪಿಯನ್ ನುಹ್ಮಾನ್ ಇಸ್ಮಾಯಿಲ್ (ರಿಯಾದ್) ಹಾಗೂ ಜನರಲ್ ವಿಭಾಗದ ವೈಯುಕ್ತಿಕ ಚಾಂಪಿಯನ್ ಪಟ್ಟವನ್ನು ಅಮಾನುದ್ದೀನ್ ಅಬ್ದುಲ್ ಖಾದರ್ (ದಮ್ಮಾಮ್) ಅವರು ತಮ್ಮದಾಗಿಸಿಕೊಂಡರು.

ಝೋನ್ ಗಳ ಪೈಕಿ 127 ಅಂಕಗಳೊಂದಿಗೆ ರಿಯಾದ್ ಝೋನ್ ಸಮಿತಿಯು 2025ನೇ ಸಾಲಿನ ಪ್ರತಿಭೋತ್ಸವದ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದರೆ 97 ಅಂಕಗಳೊಂದಿಗೆ ಜುಬೈಲ್ ಝೋನ್ ರನ್ನರ್ಸ್ ಪಟ್ಟವನ್ನು ಪಡೆಕೊಂಡಿದೆ. ಉಳಿದಂತೆ ದಮ್ಮಾಮ್ ಝೋನ್ 93, ಜಿದ್ದಾ ಝೋನ್ 51, ಮದೀನಾ ಝೋನ್ 27 ಹಾಗೂ ಅಲ್-ಕಸೀಮ್ ಝೋನ್ 19 ಅಂಕಗಳನ್ನು ಪಡೆದುಕೊಂಡಿದೆ.

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಹಾಫಿಳ್ ಫಾರೂಕ್ ಸಖಾಫಿ ಕತಾರ್, ಸಾಂತ್ವನ ಇಲಾಖೆಯ ಕಾರ್ಯದರ್ಶಿ ಝಕರಿಯ್ಯಾ ಆನೆಕಲ್ಲು, ಇಹ್ಸಾನ್ ಕರ್ನಾಟಕ ಸಮಿತಿ Executive office ಅನ್ವರ್ ಅಸ್-ಅದಿ, ಕ್ಯಾಲಬ್ ಪಬ್ಲಿಕ್ ಸ್ಕೂಲ್ ಗದಗ ಇದರ ಪ್ರಾಂಶುಪಾಲರಾದ ನಿಝಾಮ್ ಅಲ್-ಖಾದ್ರಿ, ಕೆಸಿಎಫ್ ಇರಾಕ್ ರಾಷ್ಟ್ರೀಯ ಅಧ್ಯಕ್ಷರಾದ ಮಸೂದ್ ಅಲೀ ಕಿನ್ಯಾ, ಕೆಸಿಎಫ್ ಕತಾರ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಫಾರೂಕ್ ಜೆಪ್ಪು, ಪ್ರಕಾಶನ ಕಾರ್ಯದರ್ಶಿ ಹಸೈನಾರ್ ಕಾಟಿಪಳ್ಳ, SSF ರಾಜ್ಯ ಮೀಡಿಯಾ ನಾಯಕರಾದ ಅಬ್ದುಲ್ ಹಮೀದ್, ಶಾಕಿರ್ Mse, SYS ಕೊಡಗು ಜಿಲ್ಲಾ ಪ್ರ.ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕ್ಕೇರಿ, SSF ಈಶ್ವರಮಂಗಳ ಸೆಕ್ಟರ್ ನೇತಾರರಾದ ಮುಹಮ್ಮದ್ ಸಲೀಮ್ ಝುಹ್ರಿ ಹಾಗೂ SSF ಮುಡಿಪ್ಪು ಡಿವಿಸನ್ ಮೀಡಿಯಾ ಕಾರ್ಯದರ್ಶಿ ಇಮ್ರಾನ್ ಹೆಚ್ ಕಲ್ಲು ರವರು ತೀರ್ಪುಗಾರರಾಗಿ ತೀರ್ಪನ್ನು ನೀಡಿದರು.

ಮೇ 30 ರಂದು ರಾತ್ರಿ ಸೌದಿ ಸಮಯ 7:30ಕ್ಕೆ ಆರಂಭಗೊಂಡ ಉದ್ಘಾಟನಾ ಸಮಾರಂಭದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಕಾರ್ಯದರ್ಶಿ ಆಬಿದ್ ತಂಙಳ್ ಎಮ್ಮೆಮಾಡು ರವರು ದುಆ ಮಾಡಿದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರಾಷ್ಟ್ರೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಪ್ರತಿಭೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿಯವರು ವಹಿಸಿದರು, ಸೌದಿ ರಾಷ್ಟ್ರೀಯ ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಫಾರೂಕ್ ಸಖಾಫಿ ಹೆಚ್ ಕಲ್ಲು ರವರು ಖಿರಾಅತ್ ಪಾರಾಯಣ ಮಾಡಿದ ಕಾರ್ಯಕ್ರಮವನ್ನು ಕೆಸಿಎಫ್ ಈಜಿಪ್ಟ್ ರಾಷ್ಟಾಧ್ಯಕ್ಷರಾದ ಮುಹಮ್ಮದ್ ಶರೀಫ್ ಅಹ್ಸನಿ ಅಲ್-ಹಿಕಮಿಯವರು ಉದ್ಘಾಟಿಸಿದರು. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿಗಳಾದ ಇಕ್ಬಾಲ್ ಬರಕ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರತಿಭೋತ್ಸವವನ್ನುದ್ದೇಶಿಸಿ ಮಾತನಾಡಿದರು‌. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ರಾಷ್ಟ್ರೀಯ ಅಡ್ಮಿನ್ & ಪಿ ಆರ್ ಇಲಾಖೆಯ ಅಧ್ಯಕ್ಷರೂ ಹಾಗೂ ಪ್ರತಿಭೋತ್ಸವ ಕನ್ವೀನರ್ ಶಂಸುದ್ದೀನ್ ಮಡಂತ್ಯಾರ್ ರವರು ಸ್ವಾಗತವನ್ನು ಮಾಡಿದರು.

ನಂತರ ಆರಂಭಿಸಿದ ಸ್ಪರ್ಧಾ ಕಾರ್ಯಕ್ರಮವು ಎರಡು ದಿವಸಗಳಲ್ಲಾಗಿ ನಡೆಯಿತು. ಮೇ 31 ರಂದು ರಾತ್ರಿ ಸೌದಿ ಸಮಯ 10:30ಕ್ಕೆ ಆರಂಭಗೊಂಡ ಸಮಾರೋಪ ಸಮಾರಂಭದಲ್ಲಿ ಕೆಸಿಎಫ್ ಸೌದಿ ರಾಷ್ಟ್ರೀಯ ನೇತಾರರೂ ಜಿದ್ದಾ ಝೋನ್ ಅಧ್ಯಕ್ಷರೂ ಆದ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಜಿದ್ದಾ ಇವರು ದುಆ ಮಾಡಿದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುರ್ರಶ್ಶೀದ್ ಸಖಾಫಿ ಮಿತ್ತೂರು ರವರು ವಹಿಸಿದರು, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ರವರು ಸೌದಿ ಅರೇಬಿಯಾದ ಕಾರ್ಯವೈಖರಿಗಳ ಬಗ್ಗೆ ಪ್ರಶಂಸನೀಯ ಮಾತುಗಳು ಹಾಗೂ ಈಗಿನ ಕಾಲದಲ್ಲಿ ಪ್ರತಿಭೋತ್ಸವದಂತಹ ಕಾರ್ಯಕ್ರಮದ ಆವಶ್ಯಕತೆಗಳ ಬಗ್ಗೆ ವಿವರಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಇಹ್ಸಾನ್ ಕರ್ನಾಟಕ ಇದರ EO ಅನ್ವರ್ ಅಸ್-ಅದಿ ಯವರು ಶುಭಾಶಯ ಮಾತುಗಳನ್ನಾಡಿ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಪ್ಲಾನಿಂಗ್ ಬೋರ್ಡ್ ಚೇರ್ಮಾನ್ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ಚಾಂಪಿಯನ್ಸ್ ಗಳ ಘೋಷಣೆಯನ್ನು ಮಾಡಿದರು. ಕೆಸಿಎಫ್ ಸೌದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಶೀರ್ ತಲಪ್ಪಾಡಿಯವರು ಸ್ವಾಗತಿಸಿದ ಈ ಕಾರ್ಯಕ್ರಮಕ್ಕೆ ಸಂಶುದ್ದೀನ್ ಮಡಂತ್ಯಾರ್ ಧನ್ಯವಾದ ಹೇಳಿ ಸಮಾಪ್ತಿಗೊಳಿಸಲಾಯಿತು.