ರಿಯಾದ್: ಸೌದಿ ಅರೇಬಿಯಾದಲ್ಲಿ ದುಲ್ ಹಜ್ಜ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಜೂನ್ 6 ಶುಕ್ರವಾರ ಈದುಲ್ ಅದ್ ಹಾ ಆಚರಿಸಲಾಗುವುದು ಎಂದು ಧಾರ್ಮಿಕ ವ್ಯವಹಾರಗಳ ಇಲಾಖೆ ಘೋಷಿಸಿದೆ.ಜೂನ್ 5 ಗುರುವಾರದಂದು ಅರಫಾ ಸಂಗಮ ನಡೆಯಲಿದೆ.
ಸೌದಿ ಅರೇಬಿಯಾವನ್ನು ಅವಲಂಬಿಸುವ ಕುವೈತ್, ಯುಎಇ, ಖತಾರ್, ಬಹರೈನ್ ರಾಷ್ಟ್ರಗಳಲ್ಲೂ ಶುಕ್ರವಾರ ಈದುಲ್ ಅದ್ ಹಾ ಆಚರಿಸಲಾಗುತ್ತದೆ.
ಒಮಾನ್‌ನಲ್ಲೂ ದುಲ್ ಹಜ್ಜ್ ತಿಂಗಳ ಚಂದ್ರ ದರ್ಶನವಾಗಿದ್ದು, ಜೂನ್ 6, ಶುಕ್ರವಾರದಂದು ಈದ್ ಅಲ್-ಅದ್ ಹಾ ಆಚರಿಸಲಾಗುವುದು ಎಂದು ಒಮಾನ್ ಧಾರ್ಮಿಕ ವ್ಯವಹಾರಗಳ ಸಚಿವಾಲಯ ಘೋಷಿಸಿದೆ.
ಹಜ್ ವಿಧಿವಿಧಾನಗಳಲ್ಲಿ ಪ್ರಮುಖವಾದ ಅರಫಾತ್ ಸಂಗಮ ಜೂನ್ 5 ರ ಗುರುವಾರ ನಡೆಯಲಿದೆ. ಜೂನ್ 4 ರ ಬುಧವಾರದಂದು ಹಜ್ ಯಾತ್ರಿಕರು ಮಿನಾಗೆ ತೆರಳಲಿದ್ದಾರೆ. ಹಜ್ ಯಾತ್ರೆಗಾಗಿ ವಿಶ್ವದ ವಿವಿಧ ಭಾಗಗಳಿಂದ ಲಕ್ಷಾಂತರ ವಿಶ್ವಾಸಿಗಳು ಈಗಾಗಲೇ ಮಕ್ಕಾಗೆ ಆಗಮಿಸಿದ್ದಾರೆ.
ಈದ್ ಅಲ್-ಅದ್ಹಾ ಆಚರಣೆಗಾಗಿ ಗಲ್ಫ್ ರಾಷ್ಟ್ರಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ವಾರಾಂತ್ಯ ರಜೆಗಳೊಂದಿಗೆ ಸತತ ನಾಲ್ಕು ದಿನಗಳ ರಜೆಗಳು ಲಭಿಸಲಿದೆ.