janadhvani

Kannada Online News Paper

ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಇ- ಕ್ಯಾಂಪ್

ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಾರ್ಯಕಾರಿ ಸಮಿತಿ ನಾಯಕರಿಗಾಗಿ ನಡೆಸಲಾಗುವ ‘ಇ- ಕ್ಯಾಂಪ್’ ಕಾರ್ಯಕ್ರಮವು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ಆಲಡ್ಕ, ಹರೇಕಳದಲ್ಲಿ ನಡೆಯಿತು.

ರಾಜ್ಯ ಕಾರ್ಯದರ್ಶಿ ಮನ್ಸೂರು ಅಲಿ ಕೋಟಗದ್ದೆರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ನಾಯಕರ ಜವಾಬ್ದಾರಿ ಹಾಗೂ ಕಡತ ನಿರ್ವಹಣೆಯ ಕುರಿತು ತರಗತಿ ನಡೆಸಿದರು.

ರಾಜ್ಯ ಕಾರ್ಯದರ್ಶಿಗಳಾದ ಖಲೀಲ್ ಮಾಲಿಕಿ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಇಸ್ಹಾಖ್ ಝುಹ್ರಿ ಕಾನಕೆರೆ,ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್,ಜಿಲ್ಲಾ ಉಪಾಧ್ಯಕ್ಷರುಗಳಾದ ತೌಸೀಪ್ ಸಅದಿ ಹರೇಕಳ,ಯಾಕೂಬ್ ಸಅದಿ ನಾವೂರು, ಬದ್ರುದ್ದೀನ್ ಅಝ್ಹರಿ ಕೈಕಂಬ , ನವಾಝ್ ಸಖಾಫಿ ಅಡ್ಯಾರ್ ಪದವು, ನಝೀರ್ ಹಾಜಿ ಲುಲು, ಕಾರ್ಯದರ್ಶಿಗಳಾದ ಮಹ್ಮೂದ್ ಸಅದಿ ಕುಕ್ಕಾಜೆ , ಫಾರೂಕ್ ಶೇಡಿಗುರಿ, ಹಸನ್ ಪಾಂಡೇಶ್ವರ, ಮುತ್ತಲಿಬ್ ವೇಣೂರು ಹಾಗೂ ಜಿಲ್ಲಾ ಕಾರ್ಯಕಾರಿ ಸದಸ್ಯರು ಭಾಗವಹಿಸಿ ತರಗತಿಯ ಸದುಪಯೋಗಪಡೆದರು.

ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.