janadhvani

Kannada Online News Paper

ಮೇ 22 : ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ‘ಇ- ಕ್ಯಾಂಪ್’

ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಾರ್ಯಕಾರಿ ಸಮಿತಿ ನಾಯಕರಿಗಾಗಿ ನಡೆಸಲಾಗುವ ‘ಇ- ಕ್ಯಾಂಪ್’ ಕಾರ್ಯಕ್ರಮವು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಮೇ 22 ಗುರುವಾರ ಸಂಜೆ 4:00 ಗಂಟೆಗೆ ಸುನ್ನೀ ಸೆಂಟರ್ ಆಲಡ್ಕ, ಹರೇಕಳದಲ್ಲಿ ನಡೆಯಲಿದೆ.

ಜಿಲ್ಲಾ ಉಪಾಧ್ಯಕ್ಷರಾದ ತೌಸೀಪ್ ಸಅದಿ ಹರೇಕಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಅವರು ನಾಯಕರ ಜವಾಬ್ದಾರಿ ಹಾಗೂ ಕಡತ ನಿರ್ವಹಣೆಯ ಕುರಿತು ತರಗತಿ ಮಂಡಿಸಲಿದ್ದಾರೆ ಎಂದು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.