janadhvani

Kannada Online News Paper

ಬಡತನವು ಶಾಪವಲ್ಲ, ಜೀವನದ ಸವಾಲನ್ನು ಎದುರಿಸಲು ಕಲಿಸುವ ವರವಾಗಿದೆ- ರಫೀಕ್ ಮಾಸ್ಟರ್ ಆತೂರು

ಬಾಲ್ಯ ಕಾಲದಲ್ಲಿ ಬಡತನವನ್ನು ಅನುಭವಿಸುವ ಮಕ್ಕಳು ಉಳಿದ ಮಕ್ಕಳಿಗಿಂತ ಧೈರ್ಯವಂತ ಹಾಗೂ ಜೀವನದಲ್ಲಿ ಬಂದೆರಗುವ ಸವಾಲನ್ನು ಎದುರಿಸಲು ಶಕ್ತವಾಗಿರುತ್ತಾರೆ.
ಹಾಗಾಗಿ, ಬಡತನದ ಬಗ್ಗೆ ಮಕ್ಕಳಲ್ಲಿ ಹತಾಶೆ ಮೂಡಿಸುವ ಬದಲಾಗಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಖ್ಯಾತ ತರಬೇತುದಾರ ಹಾಗೂ ಭಾಷಣಕಾರ ರಫೀಕ್ ಮಾಸ್ಟರ್ ಆತೂರು ಅವರು ಹೇಳಿದರು.

ಅವರು ತಾಜುಲ್ ಉಲಮಾ ರಿಲೀಫ್ ಎಂಡ್ ಚಾರಿಟೇಬಲ್ ಟ್ರಸ್ಟ್ (ರಿ) ದಕ ವತಿಯಿಂದ ಬಂಟ್ವಾಳ ಲಯನ್ಸ್ ಭವನದಲ್ಲಿ ನಡೆದ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಶೈಕ್ಷಣಿಕ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.

ಕುಲಾಲ್ ಜುಮಾ ಮಸ್ಜಿದ್ ಖತೀಬರಾದ ಮಸೂದ್ ಸಅದಿ, ಪ್ರಾರ್ಥನೆ ಹಾಗೂ ಆಶೀರ್ವಚನ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುನೀರ್ ಸಖಾಫಿ ಉಳ್ಳಾಲ, ಅಬ್ದುಲ್ ರಶೀದ್ ಮುಸ್ಲಿಯಾರ್, ಮ್ಯಾನೇಜರ್ ಅಲ್ ಮದೀನಾ ಮಂಜನಾಡಿ, ಶರೀಫ್ ಮದನಿ ಪಾಂಡವರಕಲ್ಲು, ಅಕ್ಷಯ ಚಾರಿಟೇಬಲ್ ಟ್ರಸ್ಟ್ ನ ಕರೀಮ್ ಕದ್ಕಾರ್, ತಾಜುಲ್ ಉಲಮಾ ರಿಲೀಫ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ವಗ್ಗ, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಎಸ್ಡಿಎಂಸಿ ಸಮನ್ವಯ ಸಮಿತಿಯ ಮೊಯ್ದೀನ್ ಪೆರ್ನೆ, ಇಲ್ಯಾಸ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ರಾಝಿಕ್ ಬಿಎಮ್ ಸ್ವಾಗತಿಸಿದರು.ಕರೀಮ್ ಕದ್ಕಾರ್ ಧನ್ಯವಾದ ಅರ್ಪಿಸಿದರು.