ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಸಂವಿಧಾನಿಕ ವಖ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ದ.ಕ ಉಲಮಾ ಕೋಆರ್ಡಿನೇಶನ್ ನೇತ್ರತ್ವದಲ್ಲಿ 2025 ಎಪ್ರಿಲ್ 18 ರಂದು ಕಣ್ಣೂರು ಶಾ ಗಾರ್ಡನ್ ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯ ಪ್ರಚಾರಾರ್ಥ 2025 ಎಪ್ರಿಲ್ 14, ಸೋಮವಾರ ರಾತ್ರಿ 7 ಗಂಟೆಗೆ ಏಕಕಾಲದಲ್ಲಿ ದಕ್ಷಣ ಕನ್ನಡ ಜಿಲ್ಲಾ (ವೆಸ್ಟ್) ವ್ಯಾಪ್ತಿಯ 33 ಸರ್ಕಲ್ ಗಳಲ್ಲಿ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಸಜೀಪ, ಬೋಳಿಯಾರ್, ಮಂಗಳೂರು , ಉಳ್ಳಾಲ, ಸುರತ್ಕಲ್, ಕೃಷ್ಣಾಪುರ, ತಲಪಾಡಿ, ಕೋಟೆಕಾರ್, ಬಂಟ್ವಾಳ, ಪಾಣೆಮಂಗಳೂರು, ಪರಂಗಿಪೇಟೆ , ಕಣ್ಣೂರು , ಕೋಣಾಜೆ, ಹರೇಕಳ, ಮೂಡಬಿದ್ರೆ, ಕಾವೂರು , ಮುಲ್ಕಿ, ಕಾಟಿಪಳ್ಳ, ಬೆಳ್ಮ , ನಾಟೆಕಲ್, ಮುಡಿಪು , ಬಾಳೆಪುಣಿ, ತೌಡುಗೋಳಿ, ಮೋಂಟುಗೋಳಿ, ಕಿನ್ಯ, ಮಂಜನಾಡಿ, ಸುರಿಬೈಲ್, ಮಂಚಿ, ಅಮ್ಮಂಜೆ , ಕೈಕಂಬ , ಸಾಲೆತ್ತೂರು, ಬೋಳಂತೂರು, ಬಜ್ಪೆ ಮುಂತಾದ ಕೇಂದ್ರಗಳಲ್ಲಿ ಪ್ರತಿಭಟನಾ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ವೈಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.