ರಿಯಾದ್: ಹಜ್ ಮತ್ತು ಉಮ್ರಾ ವೀಸಾ ಅವಧಿ ಮುಗಿದ ನಂತರ ದೇಶ ಬಿಟ್ಟು ಹೋಗದ ಯಾತ್ರಿಕರಿಗೆ 100,000 ರಿಯಾಲ್ ದಂಡ ವಿಧಿಸಲಾಗುವುದು ಎಂದು ಆಂತರಿಕ ಸಚಿವಾಲಯ ಪ್ರಕಟಿಸಿದೆ.
ಸೌದಿ ಅರೇಬಿಯಾಕ್ಕೆ ಯಾತ್ರಿಕರನ್ನು ಕರೆತಂದ ಹಜ್ ಮತ್ತು ಉಮ್ರಾ ಸೇವಾ ಕಂಪನಿಗಳು, ಅವಧಿ ಮುಗಿದಿದ್ದರೂ ದೇಶವನ್ನು ಬಿಟ್ಟು ಹೋಗದ ಯಾತ್ರಿಕರ ಬಗ್ಗೆ ಸಂಬಂಧಿತ ಇಲಾಖೆಗೆ ವರದಿ ಮಾಡಬೇಕು. ವರದಿ ಮಾಡಲು ತಡವಾದಲ್ಲಿ ಸೇವಾ ಕಂಪನಿಗಳಿಗೆ ಪ್ರತಿ ಯಾತ್ರಿಕರಿಗೆ ಒಂದು ಲಕ್ಷ ರಿಯಾಲ್‌ಗಳಂತೆ ದಂಡ ವಿಧಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಸೌದಿ ಅರೇಬಿಯಾದಿಂದ ನಿರ್ಗಮನ ಸಮಯವನ್ನು ಉಲ್ಲಂಘಿಸುವ ಯಾತ್ರಿಕರ ಸಂಖ್ಯೆಯನ್ನು ಅವಲಂಬಿಸಿ ಸೇವಾ ಕಂಪನಿಗಳ ಮೇಲೆ ಆರ್ಥಿಕ ದಂಡವು ಹೆಚ್ಚಾಗಲಿದೆ. ದೇಶದ ಹಜ್ ಮತ್ತು ಉಮ್ರಾ ನಿಯಮಗಳು ಮತ್ತು ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಚಿವಾಲಯ ಹೇಳಿದೆ.