janadhvani

Kannada Online News Paper

ಕೆಸಿಎಫ್ ಬಹರೈನ್ ಗ್ರಾಂಡ್ ಇಫ್ತಾರ್ ಪ್ರೌಢ ಸಮಾಪ್ತಿ

ಕೆಸಿಎಫ್ ಬಹರೈನ್ ಹಮ್ಮಿಕೊಂಡ ಬೃಹತ್ ಇಫ್ತಾರ್ ಸಂಗಮವು ದಿನಾಂಕ 21-03-2025 ರಂದು ಮನಾಮ ಮೈದಾನದಲ್ಲಿ ನಡೆಯಿತು. ಅಸ್ಸಯ್ಯಿದ್ ಅಲೀ ಬಾಫಕೀ ತಂಙಳ್ ರವರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ಅವರು ವಹಿಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತ ಮಾಡಿದ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಆಟಿರಿ ತಂಙಳ್ ರವರು ಮುಖ್ಯ ಪ್ರಭಾಷಣ ಮಾಡಿ ಪವಿತ್ರ ರಂಝಾನ್ ಪಾಪ ವಿಮೋಚನೆಯ ಮಾಸವಾಗಿದ್ದು ಅಲ್ಲಾಹನೊಂದಿಗೆ ಪಶ್ಚಾತ್ತಾಪ ಪಟ್ಟು ನಾವು ತೌಬಾ ಮಾಡಬೇಕಾಗಿದೆ. ಅಲ್ಲಾಹನು ಅತ್ಯಂತ ಕ್ಷಮಾಶೀಲನಾಗಿದ್ದು ಅವನ ಕ್ಷಮೆಯನ್ನು ಪಡೆದರೆ ಮಾತ್ರ ನಾವು ಪರಲೋಕ ವಿಜಯಿಯಾಗಲು ಸಾಧ್ಯ ಎಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ಯಾಲೆಸ್ತೀನ್ ರಾಯಭಾರಿ ತ್ವಾಹ ಎಂ ಅಬ್ದುಲ್ ಖಾದರ್ ಆಗಮಿಸಿದ್ದರು.‌ ವೇದಿಕೆಯಲ್ಲಿ ಸ್ಟಾರ್ಸ್ ಸರ್ವಿಸ್ ಕಂಪನಿ ದಮ್ಮಾಮ್ ಕೆಎಸ್ಎ ಇದರ ಸಿ.ಇ.ಓ ಅಬೂಬಕ್ಕರ್ ನವಾಝ್, ಬಹರೈನ್ ಉದ್ಯಮಿ ಸಾರಾ ಗ್ರೂಪ್ ಸಿ.ಇ. ಓ ಮುಹಮ್ಮದ್ ಮನ್ಸೂರ್ ಹೆಜಮಾಡಿ, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಅಧ್ಯಕ್ಷರಾದ ರಾಜ್ ಕುಮಾರ್, ಬಹರೈನ್ ಜರ್ನಲಿಸ್ಟ್ ರಾಮಿ ರಶೀದ್, ಡಿ.ಕೆ.ಎಸ್ ಸಿ ಬಹರೈನ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಸಅದಿ, ಕುಂಬ್ರ ಮರ್ಕಝುಲ್ ಹುದಾ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಯೋಜನಾ ಸಮಿತಿ ಡೈರೆಕ್ಟರ್ ಅಲಿ ಮುಸ್ಲಿಯಾರ್ ಕೊಡಗು, ಐ.ಸಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕಲಂದರ್ ಮುಸ್ಲಿಯಾರ್ ಕಕ್ಕೆಪದವು, ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಆಝ್ ಉಜಿರೆ, ಗ್ರಾಂಡ್ ಇಫ್ತಾರ್ ಚೇರ್ಮ್ಯಾನ್ ಇಕ್ಬಾಲ್ ಮಂಜನಾಡಿ, ಕನ್ವೀನರ್ ಲತೀಫ್ ಪೇರೋಲಿ, ಫೈನಾನ್ಸ್ ಕಂಟ್ರೋಲರ್ ಸೂಫಿ ಪೈಂಬಚಾಲ್, ಕೆಸಿಎಫ್ ಬಹರೈನ್ ಸಂಘಟನಾ ಇಲಾಖೆಯ ಅಧ್ಯಕ್ಷರಾದ ಮನ್ಸೂರ್ ಬೆಲ್ಮ, ಶಿಕ್ಷಣ ಇಲಾಖೆಯ ಅದ್ಯಕ್ಷರಾದ ಸುಹೈಲ್ ಬಿ.ಸಿ.ರೋಡ್, ಕಾರ್ಯದರ್ಶಿ ಅಶ್ರಫ್ ರೆಂಜಾಡಿ, ಇಹ್ಸಾನ್ ಅಧ್ಯಕ್ಷರಾದ ನಝೀರ್ ಹಾಜಿ ದೇರಳಕಟ್ಟೆ, ಸಾಂತ್ವನ ಅಧ್ಯಕ್ಷರಾದ ರಝಾಕ್ ಆನೇಕಲ್, ಕಾರ್ಯದರ್ಶಿ ಅಶ್ರಫ್ ಕಿನ್ಯ, ಪ್ರಕಾಶನ ಇಲಾಖೆಯ ಅಧ್ಯಕ್ಷರಾದ ಫಝಲ್ ಸುರತ್ಕಲ್ ಹಾಗೂ ಕಾರ್ಯದರ್ಶಿ ಶಾಫಿ ಮಾದಾಪುರ, ಆಡಳಿತ ಇಲಾಖೆಯ ಅಧ್ಯಕ್ಷರಾದ ಮೂಸಾ ಪೈಂಬಚಾಲ್, ಕಾರ್ಯದರ್ಶಿ ಸಿದ್ದೀಕ್ ಎನ್ಮೂರ್, ಪ್ರೊಫೆಶನಲ್ ಇಲಾಖೆಯ ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ, ಕೆಸಿಎಫ್ ಕತಾರ್ ಸಂಘಟನಾ ಇಲಾಖೆಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಆಶ್ರಫಿ ಹಾಗೂ ವಿವಿಧ ಸಂಘಟನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ಬೃಹತ್ ಬದ್ರ್ ಮೌಲಿದ್ ಮಜ್ಲಿಸ್ ನಡೆಯಿತು. ಇಫ್ತಾರ್ ಸಂಗಮದಲ್ಲಿ ಬಹರೈನಿನ ವಿವಿಧ ಕಡೆಗಳಿಂದ ನೂರಾರು ಮಂದಿ ಭಾಗವಹಿಸಿ ಕೆಸಿಎಫ್ ನಡೆಸುತ್ತಿರುವ ಕಾರ್ಯಯೋಜನೆಗಳ ಬಗ್ಗೆ ಪ್ರಶಂಸನೀಯ ಮಾತುಗಳನ್ನು ಅಡಿದರು.