janadhvani

Kannada Online News Paper

ಪಬ್ಲಿಕ್ ಪರೀಕ್ಷೆ-2025: ನೆಕ್ಕಿಲು ಮದ್ರಸಕ್ಕೆ ಶೇಕಡಾ 100 ಫಲಿತಾಂಶ

2025 ನೇ ಸಾಲಿನ ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ (ಇಸ್ಲಾಮಿಕ್ ಎಜುಕೇಶನ್ ಬೋರ್ಡ್) ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ, ನೂರುಲ್ ಹುದಾ ಸೆಕೆಂಡರಿ ಮದ್ರಸ ನೆಕ್ಕಿಲು ಇಲ್ಲಿನ, ಐದು, ಏಳು ಮತ್ತು ಹತ್ತನೇ ತರಗತಿಯಲ್ಲಿ ಪರೀಕ್ಷೆ ಬರೆದ ಎಲ್ಲಾ 29 ವಿದ್ಯಾರ್ಥಿಗಳು ಅತ್ಯಧಿಕ ಅಂಕದೊಂದಿಗೆ ಉತ್ತೀರ್ಣರಾಗಿ ಮದ್ರಸಕ್ಕೆ 100% ಶೇಕಡಾ ಫಲಿತಾಂಶ ತಂದಿರುತ್ತಾರೆ.

ಪ್ರತ್ಯೇಕವಾಗಿ ಎಲ್ಲಾ ವಿಷಯಗಳಲ್ಲಿಯೂ ಅಧಿಕ ಅಂಕ (600 ರಲ್ಲಿ 585) ಪಡೆದು A+ ಗ್ರೇಡ್ ಪಡೆದ 7 ನೇ ತರಗತಿಯ ವಿದ್ಯಾರ್ಥಿನಿ ಫಾತಿಮತ್ ಸುಹಾ ಜಾರಿಗೆದಡಿ ಹಾಗೂ 10 ನೇ ತರಗತಿ ವಿದ್ಯಾರ್ಥಿನಿ ಸಹ್ಲಾ ಹಲೇಜಿ (400 ರಲ್ಲಿ 384) ಇವಳಿಗೂ, ಇತರ ಎಲ್ಲಾ ವಿದ್ಯಾರ್ಥಿಗಳಿಗೂ, ಉನ್ನತ ಅಂಕ ಪಡೆಯಲು ಕಾರಣಕರ್ತರಾದ ಸದರ್ ಉಸ್ತಾದ್ ಸಹಿತ ಎಲ್ಲಾ ತರಗತಿ ಅಧ್ಯಾಪಕರಿಗೂ ಹಾಗೂ ರಕ್ಷಕರಿಗೂ ಆಡಳಿತ ಸಮಿತಿ ಪರವಾಗಿ ಪ್ರಧಾನ ಕಾರ್ಯದರ್ಶಿ ಎನ್. ಎಂ. ಶರೀಫ್ ಸಖಾಫಿ ನೆಕ್ಕಿಲ್ ರವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.