ಮಂಗಳೂರು: 75 ಕೋಟಿ ಮೌಲ್ಯದ ಮಾದಕ ವಸ್ತು ಜಾಲ ಬೇಧಿಸಿದ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಸನ್ಮಾನಿಸಲಾಯಿತು.
ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್, ಡಿಸಿಪಿ ಗೋಯಲ್, ಎಸಿಪಿ ಮನೋಜ್ ಕುಮಾರ್, ಇನ್ಸ್ಪೆಕ್ಟರ್ ರಫೀಕ್ ಹಾಗೂ ಮೂವತ್ತರಷ್ಟು ಸಿಬ್ಬಂದಿಗಳ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಕಫ್ ಸಲಹಾ ಸಮಿತಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಸನ್ಮಾನಿಸಿದರು.
ಇದೇ ವೇಳೆ, ಉಪಾಧ್ಯಕ್ಷರುಗಳಾದ ಫಕೀರಬ್ಬ ಮಾಸ್ಟರ್, ಡಾ.ಎ ಕೆ ಜಮಾಲ್, ಅಶ್ರಫ್ ಕಿನಾರ ಮಂಗಳೂರು ಹಾಗೂ ಮಕ್ತಾರ್ ವಕೀಲರು ಉಪಸ್ಥಿತರಿದ್ದರು.