ಬುರೈದ :- ಅಲ್ ಕಸೀಮ್ ಬುರೈದದಲ್ಲಿ ವೃತ್ತಿಯಲ್ಲಿದ್ದ ಉಪ್ಪಿನಂಗಡಿ – ಕರಾಯ ನಿವಾಸಿ ಇಸ್ಮಾಯಿಲ್ ಕರಾಯ 40 ದಿವಸಗಳಿಂದ ಅನಾರೋಗ್ಯದಿಂದ ಬುರೈದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮಾರ್ಚ್ 16 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಾಹುವಿನ ಅಲುಂಘನೀಯ ವಿಧಿಗೆ ಓಗೊಟ್ಟು ನಿಧನರಾದರು.
ಕಳೆದ 40 ದಿವಸಗಳಿಂದ ಆಸ್ಪತ್ರೆಯೊಂದಿಗೆ ಅವರ ಚಿಕಿತ್ಸೆ ವಿಷಯದಲ್ಲಿ ಸಂಪರ್ಕದಲ್ಲಿದ್ದ ತಾಜುದ್ದೀನ್ ಕೆಮ್ಮಾರ ನೇತೃತ್ವದ KCF ಸಾಂತ್ವನ ತಂಡವು ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ದಾಖಲೆ ಪತ್ರವನ್ನು ತಕ್ಷಣ ಸರಿಪಡಿಸಿ ಮಾರ್ಚ್ 18 ರಂದು ಸಂಜೆ ಅಸರ್ ನಮಾಜ್ ಬಳಿಕ ಬುರೈದ ಹಯ್ಯಲ್ ಖಲೀಜ್ ಮಸೀದಿ ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು.
ಬುರೈದ ಭಾಗದ ಸಮಾಜ ಸೇವಕ ಲತೀಫ್ ಶೇರಿ
ಸೇರಿದಂತೆ ಮೃತ ಇಸ್ಮಾಯಿಲ್ ಅವರ ಕುಟುಂಬಸ್ಥರು, KCF ಕಾರ್ಯಕರ್ತರು , ಮಂಗಳೂರು ಮೂಲದ ಪ್ರವಾಸಿ ಸಹೋದರರು ದಫನ ಕಾರ್ಯದಲ್ಲಿ ಪಾಲ್ಗೊಂಡರು.
ಸಾಂತ್ವನ ಇಲಾಖೆ
KCF ಅಲ್ ಕಸೀಮ್ ಝೋನ್