janadhvani

Kannada Online News Paper

ಅಲಿ ಬಾಬಾ ನೂತನ ಔಖಾಫ್ ಚೇರ್ಮ್ಯಾನ್ ಆಗಿ ಆಯ್ಕೆ ಸಂತಸ ತಂದಿದೆ- ಇಹ್ಸಾನ್ ಕರ್ನಾಟಕ

ಇಹ್ಸಾನ್ ಕರ್ನಾಟಕದ ಹಿತೈಷಿಯೂ, ಮಾರ್ಗದರ್ಶಕರು ಆಗಿರುವ ಕೆ.ಬಿ.ಎನ್ ಯೂನಿವರ್ಸಿಟಿ ಗುಲ್ಬರ್ಗಾ ಚಾನ್ಸಲರ್ ಆಗಿರುವ ಸಯ್ಯಿದ್ ಅಲಿ ಹುಸೈನ್ ರವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಗತಿ ಅತ್ಯಂತ ಸಂತೋಷದಾಯಕವೆಂದು ಇಹ್ಸಾನ್ ಕರ್ನಾಟಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಗುಲ್ಬರ್ಗದ ಆಧ್ಯಾತ್ಮಿಕ ರಂಗದಲ್ಲಿ,ಮುಸ್ಲಿಂ ಸಮುದಾಯಕ್ಕೆ ಮುಂಚೂಣಿ ನಾಯಕರಾಗಿರುವ ಅಲಿ ಬಾಬಾ , ಬಂದೇ ನವಾಝ್ ದರ್ಗಾದ ಮೂಲಕ ಶೈಕ್ಷಣಿಕ ಚಳುವಳಿಗೆ ಶಕ್ತಿ ನೀಡಿದವರು. ಅವರ ಸಾಮಾಜಿಕ ,ಶೈಕ್ಷಣಿಕ , ಧಾರ್ಮಿಕ ಕೊಡುಗೆಗಳು ಮುಂದೆ ವಕ್ಫ್ ಮಂಡಳಿ ಮೂಲಕವೂ ಸಮುದಾಯಕ್ಕೆ ಕೊಡುಗೆ ನೀಡಲು ಅವರಿಂದ ಸಾಧ್ಯವಾಗಲಿ ಎಂಬುದು ಇಹ್ಸಾನ್ ಕರ್ನಾಟಕದ ಹಾರೈಕೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಅದ್ದೂರಿಯಾಗಿ ನಡೆದ ಇಹ್ಸಾನೋತ್ಸವ25 ಸ್ವಾಗತ ಸಮಿತಿಯ ಕೋಶಾಧಿಕಾರಿಯಾಗಿಯೂ ಅಲಿ ಹುಸೈನಿಯವರು ಇಹ್ಸಾನ್ ಗಾಗಿ ಸೇವೆ ಸಲ್ಲಿಸಿದ್ದರು. ಈ ಎಲ್ಲಾ ಅವರ ಸಾಮಾಜಿಕ ಶೈಕ್ಷಣಿಕ ಗುರುತುಗಳು ಗುರುತಿಸಿದ್ದು ಅವರ ಆಯ್ಕೆ ಸೂಕ್ತವೆಂದು ಇಹ್ಸಾನ್ ಕರ್ನಾಟಕ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಎಸ್ ವೈ ಎಸ್ ಅಧ್ಯಕ್ಷರೂ ಹಫೀಳ್ ಸಅದಿ ಕೊಳಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಸುನ್ನೀ ಸಂಘಟನೆಗಳ ಶೈಕ್ಷಣಿಕ ಚಳುವಳಿಯಾಗಿರುವ ಇಹ್ಸಾನ್ ಚಟುವಟಿಕೆಗೆ ದೊಡ್ಡ ಶಕ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ ನೂತನ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಅಲಿ ಹುಸೈನ್ ಸಾಹೆಬ್.