ಬೆಂಗಳೂರು: ರಂಝಾನ್ 21 ನೇ ರಾತ್ರಿ(ಮಾರ್ಚ್ 21 ಶುಕ್ರವಾರ) ಬೆಂಗಳೂರಿನ ಹಝ್ರತ್ ಖುದ್ದೂಸ್ ಸಾಹೆಬ್ ಈದ್ಗಾ ಮಿಲ್ಲರ್ಸ್ ರೋಡ್ ಶಿವಾಜಿ ನಗರದಲ್ಲಿ ನಡೆಯುವ ಗ್ರ್ಯಾಂಡ್ ರೂಹಾನಿ ಇಜ್ತಿಮಾದ ಪ್ರಚಾರಾರ್ಥ 60 ಕ್ಕೂ ಮಿಕ್ಕ ಕೇಂದ್ರಗಳಲ್ಲಿ ಮಾರ್ಚ್ 8ಕ್ಕೆ ಗ್ರ್ಯಾಂಡ್ ಇಫ್ತಾರ್ ಸಂಗಮ ನಡೆಯಲಿದೆ.
ಕರ್ನಾಟಕ ಮುಸ್ಲಿಂ ಜಮಾಅತ್,ಎಸ್.ವೈ.ಎಸ್, ಎಸ್.ಎಸ್.ಎಫ್ ಸಂಘಟನೆಗಳ ಶಾಖೆಗಳನ್ನು ಕೇಂದ್ರಿಕರಿಸಿ ಹಾಗೂ ಎಸ್.ಎಮ್.ಎ, ಎಸ್ ಜೆ ಯು, ಎಸ್ ಜೆ ಎಂ ಗಳ ನೇತೃತ್ವದಲ್ಲಿ ಮದ್ರಸ ಮಸೀದಿಗಳನ್ನು ಕೇಂದ್ರೀಕರಿಸಿ ಗ್ರ್ಯಾಂಡ್ ಇಫ್ತಾರ್ ಸಂಗಮ ನಡೆಯಲಿದೆ.ಪ್ರತೀ ಕೇಂದ್ರಗಳಲ್ಲೂ ದಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸಲಿರುವರು.
ಗ್ರ್ಯಾಂಡ್ ರೂಹಾನಿ ಇಜ್ತಿಮಾದ ಪ್ರಚಾರಾರ್ಥ ಪ್ರತೀ ಘಟಕಗಳಲ್ಲೂ ವಿವಿಧ ಕಾರ್ಯಕ್ರಮಗಳು ನಡೆದು ಬರುತ್ತಿದ್ದು,ಪೆಬ್ರವರಿ 28ರಂದು ಎಲ್ಲಾ ಮಸೀದಿಗಳ ಮುಂಭಾಗದಲ್ಲಿ ಜುಮಾ ನಮಾಜಿನ ನಂತರ ಮುಹಬ್ಬತ್ ಕೀ ಶರ್ಬತ್ ಎಂಬ ಹೆಸರಿನಲ್ಲಿ ಸಿಹಿ ಪಾನೀಯಗಳನ್ನು ವಿತರಿಸಲಾಗಿದೆ.ಬೆಂಗಳೂರಿನ ಹತ್ತಿರದ ಜಿಲ್ಲೆಗಳಲ್ಲೂ ಪ್ರಚಾರ ಪ್ರಕ್ರಿಯೆಗಳು ನಡೆಯುತ್ತಿವೆ. ಗ್ರ್ಯಾಂಡ್ ರೂಹಾನಿ ಇಜ್ತಿಮಾಕ್ಕೆ ಸುಲ್ತಾನುಲ್ ಉಲಾಮ ಎ.ಪಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ.