janadhvani

Kannada Online News Paper

ಡಿಕೆಯಸ್ಸಿ ಜುಬೈಲ್ ಘಟಕದ 30 ನೇ ವಾರ್ಷಿಕ ಮಹಾಸಭೆ- ನೂತನ ಸಾರಥಿಗಳ ಆಯ್ಕೆ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಜುಬೈಲ್ ಘಟಕದ 30 ನೇ ವಾರ್ಷಿಕ ಮಹಾಸಭೆಯು 16, ಫೆಬ್ರವರಿ 2025 ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಜುಬೈಲ್ ಸಾಫ್ರಾನ್ ಹೋಟೆಲ್ ಸಭಾಂಗಣದಲ್ಲಿ 8.45 ಕ್ಕೆ ಸರಿಯಾಗಿ ಘಟಕದ ಅಧ್ಯಕ್ಷರಾದ ಜನಾಬ್ ಅಶ್ರಫ್ ನಾಳರವರ ಅಧ್ಯಕ್ಷತೆಯಲ್ಲಿ ಬಹಳ ಯಶಸ್ವಿಯಾಗಿ ಜರಗಿತು.

ಮೊದಲಿಗೆ ಡಿಕೆಯಸ್ಸಿ ಯೂತ್ ವಿಂಗ್ ಗೌರವ ಅಧ್ಯಕ್ಷರಾದ ಜನಾಬ್ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ರವರ ನೇತೃತ್ವದಲ್ಲಿ ದುಆ ದೊಂದಿಗೆ ಪ್ರಾರಂಭಗೊಂಡ ಮಹಾಸಭೆಯಲ್ಲಿ
ಉಸ್ತಾದ್ ಅಬ್ದುಲ್ ರಹ್ಮಾನ್ ಮದನಿ ಪವಿತ್ರ ಖುರ್ ಆನ್ ಪಠಿಸಿದರು.
ಮುಹಮ್ಮದ್ ಅಲೀ ಅಲ್ ಮುಝೈನ್ ಕಾರ್ಯಕ್ರಮ ನಿರೂಪಿಸಿದರು.
ಜನಾಬ್ ಇಖ್ಬಾಲ್ ಮಲ್ಲೂರ್ ರವರು ಸಭೆಗೆ ಆಗಮಿಸಿದ ಅತಿಥಿ ಹಾಗೂ ಸದಸ್ಯರನ್ನು ಆತ್ಮಾರ್ಥವಾಗಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಲ್ಲಾಹನ ಪವಿತ್ರ ನಾಮದಿಂದ ಉದ್ಘಾಟಿಸುತ್ತಾ ಜನಾಬ್ ಅಬ್ದುಲ್ ಹಮೀದ್ ಉಳ್ಳಾಲ ರವರು ಡಿಕೆಯಸ್ಸಿಯ ಅಭಿವ್ರಧ್ಧಿ ಕಾರ್ಯಕ್ರಮಗಳ ಅವಲೋಕನದ ಬಗ್ಗೆ ವಿವರಿಸಿದರು.

ಕೇಂದ್ರ ಸಮಿತಿಯ ಕೋಶಾಧಿಕಾರಿ ಜನಾಬ್ ದಾವೂದ್ ಕಜೆಮಾರ್ ಮಾತಾಡಿ ಡಿಕೆಯಸ್ಸಿ ಸಂಘಟನೆಯು ಕೊಲ್ಲಿ ರಾಷ್ಟ್ರದಲ್ಲಿ ಎಲ್ಲಾ ಸುನ್ನತ್ ಜಮಾಅತಿನ ಸಂಘಟನೆಗೆ ಮಾದರಿಯಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಡಿಕೆಯಸ್ಸಿ ಜುಬೈಲ್ ಘಟಕದ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಅಲ್ ಇಹ್ಸಾನ್ ಸಂಸ್ಥೆಯ ಬೆಳವಣಿಗೆ ಬೇಕಾಗಿ ಶ್ರಮಿಸಲು ಕರೆನೀಡಿದರು.
ಕಾರ್ಯದರ್ಶಿ ಜನಾಬ್ ಮುಹಮ್ಮದ್ ಅಲಿ ಕೃಷ್ಣಾಪುರ ವಾರ್ಷಿಕ ವರದಿ ಮಂಡಿಸಿದರು ಪ್ರದಾನ ಕಾರ್ಯದರ್ಶಿ ಜನಾಬ್ ಅಬೂಬಕ್ಕರ್ ಬರ್ವ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅನುಮೋದನೆ ಪಡೆದರು.

ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ಕೇಂದ್ರ ಸಮಿತಿಯ ವಿಷನ್ 30 ಚೇರ್ಮ್ಯಾನ್ ಜನಾಬ್ ಹಾತಿಂ ಕುಳೂರ್ ಸಾಂದರ್ಭಿಕವಾಗಿ ಡಿಕೆಯಸ್ಸಿ ಕಾರ್ಯ ಪ್ರವರ್ತನೆಯ ಬಗ್ಗೆ ಮಾತಾಡಿದರು. ದಮ್ಮಾಮ್ ವಲಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ ಕಾಪು ಜುಬೈಲ್ ಘಟಕದ ಕಾರ್ಯ ಪ್ರವರ್ತನೆಯನ್ನು ಮೆಚ್ಚಿ ಇನ್ನು ಮುಂದೆ ಬರುವ ಹೊಸ ಸಮಿತಿಯು ಇದಕ್ಕಿಂತ ಮಿಗಿಲಾಗಿ ಕಾರ್ಯ ಪ್ರವರ್ತನೆ ಗಯ್ಯಲು ಅಲ್ಲಾಹು ತೌಫೀಖ್ ನೀಡಿ ಅನುಗ್ರಹಿಸಲಿ (ಆಮೀನ್ ) ಎಂದು ದುವಾದೊಂದಿಗೆ ಮುಂದಿನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು. ಸಭಾ ಅಧ್ಯಕ್ಷರಾದ ಜನಾಬ್ ಅಶ್ರಫ್ ನಾಳ ಮಾತಾಡಿ ಜುಬೈಲ್ ಘಟಕದಲ್ಲಿ ನಮ್ಮ ಅವಧಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಸದಸ್ಯರೆಲ್ಲರಿಗೂ ಅಭಿನಂದನೆ ಸಲ್ಲಿಸಿ ನಮ್ಮ ಅವಧಿಯಲ್ಲಿ ಏನಾದರೂ ತಪ್ಪು ಸಂಭವಿಸಿದ್ದಲ್ಲಿ ಕ್ಷಮಿಸಿ ಮುಂದಿನ ಕಾರ್ಯಕಾರಿ ಸಮಿತಿಯು ಡಿಕೆಯಸ್ಸಿ ಯ ಅಭಿವ್ರಧ್ಧಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಸಭೆಯಲ್ಲಿ ಜುಬೈಲ್ ಯೂತ್ ವಿಂಗ್ ಅಧ್ಯಕ್ಷರಾದ ಜನಾಬ್ ಸಾಮಿತ್ ಪಡುಬಿದ್ರಿ, ದಮ್ಮಾಮ್ ಘಟಕದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ ಕೊಂಚಾರ್, ಕೇಂದ್ರ ಸಮಿತಿಯ ಮಾಜಿ ಪ್ರದಾನ ಕಾರ್ಯದರ್ಶಿ ಜನಾಬ್ ಎನ್. ಯಸ್. ಅಬ್ದುಲ್ಲಾ, ತುಕ್ಬ ಘಟಕದಿಂದ ಜನಾಬ್ ಅಬ್ದುಲ್ ಅಝೀಝ್ ಮೂಳೂರ್, ಕೋಬರ್ ಘಟಕದಿಂದ ಜನಾಬ್ ಅಶ್ರಫ್ ಚಿಕ್ಕಮಂಗಳೂರು, ಶಾಫಿ ಬೆಳ್ಳಾರೆ, ಅಬ್ದುಲ್ ಹಮೀದ್ ಸುಳ್ಯ, ದಮ್ಮಾಮ್ ಘಟಕದಿಂದ ಅಬೂಬಕ್ಕರ್ ಅಜಿಲಮೊಗರು, ಉಮರ್ ಮರವೂರ್ ಹಾಜರಿದ್ದರು.
ದಮ್ಮಾಂ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತ್ರತ್ವ ದಲ್ಲಿ 2025-26ನೇ ಸಾಲಿನ ಸಮಿತಿ ರಚಿಸಲಾಯಿತು.
ಅಧ್ಯಕ್ಷರು : ಮುಹಮ್ಮದ್ ಅಲಿ ಕೃಷ್ಣಾಪುರ ,
ಪ್ರಧಾನ ಕಾರ್ಯದರ್ಶಿ: ಇಕ್ಬಾಲ್ ಮಲ್ಲೂರ್
ಕೋಶಾಧಿಕಾರಿ: ಅನ್ವರ್ ಪಡುಬಿದ್ರಿ
ಸಹ ಕೋಶಾಧಿಕಾರಿ: ಅಬ್ದುಲ್ ಕರೀಂ ಪಾಣೆಮಂಗಳೂರು
ಉಪಾಧ್ಯಕ್ಷರು : ಸಮೀರ್ ಪಡುಬಿದ್ರಿ
ಉಪಾಧ್ಯಕ್ಷರು: ಅಬ್ದುಲ್ ಹಮೀದ್ ಕಾಪು,
ಉಪಾಧ್ಯಕ್ಷರು:ಮುಹಮ್ಮದ್ ಅಲೀ ಗಲ್ಫ್ ಬೇಕರಿ ಉಪ್ಪಿನಂಗಡಿ
ಕಾರ್ಯದರ್ಶಿ:ಜಾಫರ್ ಮುಂಕೂರ್
ಕಾರ್ಯದರ್ಶಿ:ಉಬೈದ್ ಸುರಿಬೈಲ್
ಕಾರ್ಯದರ್ಶಿ: ಯಹ್ಯಾ ಕೆ ಸಿ ರೋಡ್
ಸಂವಹನಾ ಕಾರ್ಯದರ್ಶಿ : ಅಹ್ಮದ್ ಕಣ್ಣಂಗಾರ್
ಡೆವಲಪ್ಮೆಂಟ್ ಚೆಯರ್ಮಾನ್ : ಜಮಾಲ್ ಕಣ್ಣಂಗಾರ್
ಮುಖ್ಯ ಸಲಹೆಗಾರ :ಹಾತಿಂ ಕೂಳೂರು
ಸಲಹೆಗಾರ : ಕೆ ಎಚ್ ಮುಹಮ್ಮದ್ ರಫೀಖ್ ಸೂರಿಂಜೆ
ಲೆಕ್ಕ ಪರಿಶೋಧಕರು ;ಅಬ್ದುಲ್ ಹಮೀದ್ ಉಳ್ಳಾಲ
ಕಾರ್ಯಕಾರಿ ಸದಸ್ಯರು :
1.ಸುಲೈಮಾನ್ ಮಿಲನ್ ,
2.ಮುಹಮ್ಮದ್ ಅಲಿ ಮುಂಕೂರ್
3.ಮುಸ್ತಫಾ ಮೈನ
4.ಅಶ್ರಫ್ ನಾಳ ,
5.ದಾವೂದ್ ಕಜಮಾರ್,
6.ಅಬೂಬಕ್ಕರ್ ಬರ್ವ

ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮುಹಮ್ಮದ್ ಅಲಿ ಕೃಷ್ಣಾಪುರ ಡಿಕೆಯಸ್ಸಿ ಯ ಅಭಿವ್ರಧ್ಧಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಪ್ರಧಾನ ಕಾರ್ಯದರ್ಶಿ ಇಖ್ಬಾಲ್ ಮಲ್ಲೂರ್ ಧನ್ಯವಾದ ಗೈದು ಕಫ್ಫಾರತುಲ್ ಮಜ್ಲಿಸ್ ಹಾಗೂ ಸ್ವಲಾತಿನೊಂದಿಗೆ ಸಭೆ ಮುಕ್ತಾಯವಾಯಿತು.