janadhvani

Kannada Online News Paper

ಕಿನ್ಯ ಸರ್ಕಲ್ ಮುಸ್ಲಿಂ ಜಮಾಅತ್- ನೂತನ ಪದಾಧಿಕಾರಿಗಳು

ಆಲಿ ಕುಂಞಿ ಬಾಕಿಮಾರ್,ಅಬ್ದುಲ್ ಖಾದರ್ ಪದಿಯಾರೆ,ಮಹ್ಮೂದ್ ಉಕ್ಕುಡ ಸಾರಥ್ಯ

ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿಯ ಮಹಾಸಭೆಯು ದಿನಾಂಕ 16/02/2025,ಆದಿತ್ಯವಾರ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ಖುತುಬಿನಗರ ಉಸ್ಮಾನ್ ಉಸ್ತಾದ್ ರವರ ದುಆ ದೊಂದಿಗೆ ನಡೆಯಿತು.SჄS ದ.ಕ ವೆಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ ಉದ್ಘಾಟಿಸಿ ಮಾತನಾಡಿದರು.

ಕಿನ್ಯ ಸರ್ಕಲ್ ಸಮಿತಿಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಂ ಇಸ್ಮಾಈಲ್ ಸಾಗ್ ಕಳೆದ ಸಾಲಿನ ಕಾರ್ಯಾಚರಣೆಯ ವರದಿ ಹಾಗೂ ಕೋಶಾಧಿಕಾರಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ ಲೆಕ್ಕಪತ್ರ ಮಂಡಿಸಿದರು.
ದೇರಳಕಟ್ಟೆ ಝೋನ್ ಸಮಿತಿ ಅಧ್ಯಕ್ಷ ಮುಫತ್ತಿಶ್ ಇಸ್ಮಾಈಲ್ ಸಅದಿ ಉಸ್ತಾದ್ ಚುನಾವಣಾಧಿಕಾರಿಯಾಗಿ ಆಗಮಿಸಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.

ಅಧ್ಯಕ್ಷರಾಗಿ ಆಲಿ ಕುಂಞಿ ಬಾಕಿಮಾರ್,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ (ಸೇಕಬ್ಬ) ಪದಿಯಾರೆ,ಕೋಶಾಧಿಕಾರಿಯಾಗಿ ಮಹ್ಮೂದ್ (ಉಳ್ಳಾಲ) ಉಕ್ಕುಡ ಆಯ್ಕೆಯಾದರು.
ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ (ಉಪಾಧ್ಯಕ್ಷರು) ಮುಹಮ್ಮದ್ ಹನೀಫ್ ಸ್ಟೋರ್ (ಮೀಡಿಯಾ ಕಾರ್ಯದರ್ಶಿ) ಉಸ್ಮಾನ್ ಉಸ್ತಾದ್ ಖುತುಬಿನಗರ (ದಅ್‌ವಾ ಕಾರ್ಯದರ್ಶಿ) ಕೆ.ಎಚ್ ಮೂಸಕುಂಞಿ ಬದ್ರಿಯಾ ನಗರ (ಇಸಾಬ ಕಾರ್ಯದರ್ಶಿ) ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ (ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ) ಕೆ.ಎಂ ಇಸ್ಮಾಈಲ್ ಹಾಜಿ ಸಾಗ್ (ಚಾರಿಟಿ & ಸಹಾಯ್ ಕಾರ್ಯದರ್ಶಿ) ಎಂಕೆಎಂ ಇಸ್ಮಾಈಲ್ ಮೀಂಪ್ರಿ (ಸಂಘಟನಾ ಕಾರ್ಯದರ್ಶಿ)
ಉಳಿದಂತೆ ಅಬ್ಬಾಸ್ ಹಾಜಿ ಎಲಿಮಲೆ, ಮುಹಮ್ಮದ್ ನಡುದಾರಿ, ಸೇಕಬ್ಬ(ಅಬ್ಬು)ಖುತುಬಿನಗರ, ಅಬೂಬಕರ್ ಖುತುಬಿನಗರ, ಅಬ್ಬಾಸ್ ಖುತುಬಿನಗರ, ಯೂಸುಫ್ Ksrtc,ಅಬ್ದುಲ್ ಖಾದರ್ ಬದ್ರಿಯಾ ನಗರ, ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ,ಎ.ಬಿ ಹಸನ್ ಉಕ್ಕುಡ,ಅಬ್ದುಲ್ ಲತೀಫ್ ಉಕ್ಕುಡ, ಅಬ್ದುಲ್ ಅಝೀಝ್ ರಹ್ಮತ್ ನಗರ, ಅಬ್ದುರ್ರಝ್ಝಾಖ್ ರಹ್ಮತ್ ನಗರ,ಹಂಝ ಕುರಿಯ,ಇಬ್ರಾಹೀಂ ಕುರಿಯ,ಆಲಿ ಕುಂಞಿ ಮೀಂಪ್ರಿ, ಅಬ್ದುಲ್ ಲತೀಫ್ ಮೀಂಪ್ರಿ ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

ದೇರಳಕಟ್ಟೆ ಝೋನ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫರೀದ್ ನಗರ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
SჄS ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಉಮರುಲ್ ಫಾರೂಖ್ ಸಖಾಫಿ ಮೀಂಪ್ರಿ, ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಬೆಳರಿಂಗೆ,SSF ಕಿನ್ಯ ಸೆಕ್ಟರ್ ಅಧ್ಯಕ್ಷ ಸಫ್ವಾನ್ ಉಪಸ್ಥಿತರಿದ್ದರು.