janadhvani

Kannada Online News Paper

ವೇಣೂರು ನಿಟ್ಟಡೇ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ ಮತ್ತು ನವೀಕೃತ ಎರಡು ಕೊಠಡಿಗಳ ಉದ್ಘಾಟನೆ

ಬೆಳ್ತಂಗಡಿ; ಜಿಲ್ಲಾ ಸಮನ್ವಯ ವೇದಿಕೆ ದ.ಕ ಜಿಲ್ಲೆ
ಬೆಳ್ತಂಗಡಿ ತಾಲೂಕು ವೇಣೂರು ನಿಟ್ಟಡೇ ಶಾಲೆಯಲ್ಲಿ ನಡೆದ ಮಕ್ಕಳ ಮೆಟ್ರಿಕ್ ಮೇಳ ಮತ್ತು ನವೀಕೃತ ಎರಡು ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸರಕಾರಿ ಶಾಲೆಯಲ್ಲಿ 214 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಸ್.ಡಿ.ಎಂ.ಸಿ ಅಧ್ಯಕ್ಷ ಅಶ್ರಫ್ ರವರ ಕಾರ್ಯ ವೈಖರಿ ಬಗೆ ಅಲ್ಲಿಯ ಗ್ರಾಮ ಪಂಚಾಯತ್ ಅಧ್ಯಕ್ಷರು ಪೋಷಕರು ಮತ್ತು ಶಿಕ್ಷಕರು ಬಹಳ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.


ಶಾಲೆಯ ಅಭಿವೃದ್ಧಿಯ ಬಗ್ಗೆ ಪೋಷಕರಿಗೆ ಮತ್ತು ದಾನಿಗಳಿಗೆ ಇರುವ ಕಾಳಜಿ ತಿಳಿದು ಸಂತೋಷ ಪಡುವ ವಿಚಾರವಾಗಿದೆ, ಶಿಕ್ಷಕರು ಕೂಡ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಶಕ್ತಿ ಮೀರಿ ಪ್ರಯತ್ನಿಸುವುದನ್ನು ಕೂಡ ಪೋಷಕರಿಂದ ತಿಳಿದುಬರುತ್ತದೆ, ಗ್ರಾಮ ಪಂಚಾಯತ್ ಕೂಡ ಶಾಲೆಯ ಬಗ್ಗೆ ವಿಶೇಷಕಾಲಜಿಯನ್ನು ವಹಿಸಿಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.