ಸುನ್ನೀ ಕೋ-ಆರ್ಡಿನೇಶನ್ ಮುಡಿಪು ಮುಂದಾಳತ್ವದಲ್ಲಿ ನಡೆಯುವ ಸುನ್ನೀ ಆದರ್ಶ ಮುಖಾಮುಖಿ ಇದೇ ಬರುವ 26ಬುಧವಾರ ಸಂಜೆ 4.30ಗಂಟೆಗೆ ಮುಡಿಪು ಜಂಕ್ಷನ್ ನಲ್ಲಿ ನಡೆಯುತ್ತಿದ್ದು , ಈ ಅಭೂತಪೂರ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸುನ್ನೀ ಕೋ ಆರ್ಡಿನೇಷನ್ ಮೋಂಟುಗೋಳಿ ಕರೆ ನೀಡಿದೆ.
ಕಾರ್ಯಕ್ರಮದಲ್ಲಿ ಅಲವಿ ಸಖಾಫಿ ಕೊಳತ್ತೂರು, ಖಾಝಿ ಪಾತೂರು ಉಸ್ತಾದ್ ,ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ ನಾಯಕತ್ವ ನೀಡಲಿದ್ದು, ಮುಕ್ತವಾಗಿ ಸಂಶಯ ನಿವಾರಣೆಗೆ ವೇದಿಕೆ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ವಿಜಯಗೊಳಿಸುವಂತೆ ಸುನ್ನೀ ಕೋ ಆರ್ಡಿನೇಷನ್ ಮೋಂಟುಗೋಳಿ ನಾಯಕರಾದ ಟಿ.ಎಂ ಮುಹ್ಯುದ್ದೀನ್ ಸ ಅದಿ ತೋಟಾಲ್ , ಬಶೀರ್ ಮಜಲು ಮೋಂಟುಗೋಳಿ , ಖಾಲಿದ್ ಹಾಜಿ ಭಟ್ಕಳ ಜಂಟಿ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.