janadhvani

Kannada Online News Paper

ಮುಡಿಪು ಆದರ್ಶ ಮುಖಾಮುಖಿ- ತಾಜುಲ್ ಉಲಮಾ ಹೆಲ್ಪ್ ವಿಂಗ್, ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಷನ್ ಯಶಸ್ವಿಗೆ ಕರೆ

ಸುನ್ನೀ ಕೋ-ಆರ್ಡಿನೇಶನ್ ಮುಡಿಪು ಮುಂದಾಳತ್ವದಲ್ಲಿ ನಡೆಯುವ ಸುನ್ನೀ ಆದರ್ಶ ಮುಖಾಮುಖಿ ಇದೇ ಬರುವ 26ಬುಧವಾರ ಸಂಜೆ 4.30ಗಂಟೆಗೆ ಮುಡಿಪು ಜಂಕ್ಷನ್ ನಲ್ಲಿ ನಡೆಯುತ್ತಿದ್ದು , ಈ ಅಭೂತಪೂರ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ತಾಜುಲ್ ಉಲಮಾ ಹೆಲ್ಪ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಷನ್ ಮಂಗಳೂರು ಕರೆ ನೀಡಿದೆ.

ಕಾರ್ಯಕ್ರಮದಲ್ಲಿ ಅಲವಿ ಸಖಾಫಿ ಕೊಳತ್ತೂರು, ಖಾಝಿ ಪಾತೂರು ಉಸ್ತಾದ್ ,ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ ನಾಯಕತ್ವ ನೀಡಲಿದ್ದು, ಮುಕ್ತವಾಗಿ ಸಂಶಯ ನಿವಾರಣೆಗೆ ವೇದಿಕೆ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ವಿಜಯಗೊಳಿಸುವಂತೆ ತಾಜುಲ್ ಉಲಮಾ ಹೆಲ್ಪ್ ವಿಂಗ್, ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಷನ್ ಅಧ್ಯಕ್ಷರಾದ ಖಾಲಿದ್ ಹಾಜಿ ಭಟ್ಕಳ, ಪ್ರಧಾನ ಕಾರ್ಯದರ್ಶಿ ಫಝಲ್ ಮುಡಿಪು , ಕೋಶಾಧಿಕಾರಿ ಎ.ಎಮ್ ಜಾವಿದ್ ಮೋಂಟೆಪದವು ಹೇಳಿಕೆಯಲ್ಲಿ ತಿಳಿಸಿದ್ದಾರೆ.