janadhvani

Kannada Online News Paper

ಮಲೇಷಿಯಾ ಕೆಸಿಎಫ್ ವತಿಯಿಂದ ಡಾ|ಝೈನಿ ಕಾಮಿಲ್ ಅವರಿಗೆ ಸನ್ಮಾನ

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಚಾರಾರ್ಥ ಮಲೇಷಿಯಾ ಪ್ರವಾಸದಲ್ಲಿರುವ ಡಾ ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಝೖನೀ ಅವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಮಲೇಷಿಯಾ ರಾಷ್ಟೀಯ ಸಮಿತಿಯ ವತಿಯಿಂದ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಜೋಹರ್ ಪ್ರಾಂತ್ಯದ ತಮನ್ ದಮಾಯಿ ಜಯ ಸ್ವಲಾತ್ ಮಜ್ಲಿಸ್ ನಲ್ಲಿ ನಡೆದ ಸಮಾರಂಭದಲ್ಲಿ ಕೆಸಿಎಫ್ ಮಲೇಷಿಯಾ ರಾಷ್ಟೀಯ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಸಂಸೆ ಅಧ್ಯಕ್ಷತೆ ವಹಿಸಿದರು.

ಪ್ರಧಾನ ಕಾರ್ಯದರ್ಶಿ ಶರೀಫ್ ಸಖಾಫಿ ಮಠ ಸಂದೇಶ ಭಾಷಣ ಮಾಡಿದರು. ಪ್ರೊಫೆಷನಲ್ ಕಾರ್ಯದರ್ಶಿ ಶರಫುದ್ದೀನ್ ಕುದ್ರೆಗುಂಡಿ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು