ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SSF) ಬೆಂಗಳೂರು ಜಿಲ್ಲೆ ಇದರ ವಾರ್ಷಿಕ ಮಹಾಸಭೆಯು ಸೇವರಿ ಬ್ಯುಸಿನೆಸ್ ಹೋಟೆಲ್ ಮಡಿವಾಳದಲ್ಲಿ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಲತೀಫ್ ನಈಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಸ್.ವೈ.ಎಸ್ ಜಿಲ್ಲಾ ಅಧ್ಯಕ್ಷರಾದ ಜಾಫರ್ ನೂರಾನಿ ಪ್ರಾರ್ಥನೆ ಯೊಂದಿಗೆ ಚಾಲನೆ ನೀಡಿದರು.ಸಿ ಸಿ ಕಾರ್ಯದರ್ಶಿ ಅಲ್ತಾಫ್ ಅಲಿ ಸ್ವಾಗತಿಸಿ ಕೆ.ಎಂ.ಜೆ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಹಮಾನ್ ಹಾಜಿ ಉದ್ಘಾಟಿಸಿದರು. ಕೋಆರ್ಡಿನೇಷನ್ ಸಮಿತಿ ಅಧ್ಯಕ್ಷರಾದ ಅನಸ್ ಸಿದ್ದೀಖಿ ತರಗತಿ ನಡೆಸಿದರು.


ರಾಜ್ಯಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಮುಸ್ತಾಫಾ ನಈಮಿ ಸಖಾಫಿ & ಜಿಲ್ಲಾ ಉಸ್ತುವಾರಿ ಮುಜೀಬ್ ಕೊಡಗು ರವರು ಕೌನ್ಸಿಲ್ ಗೆ ನೇತೃತ್ವ ನೀಡಿದರು.
ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಶಂಸುದ್ದೀನ್ ಜೆ ಪಿ ನಗರ ವಾರ್ಷಿಕ ವರದಿಯನ್ನೂ, ಕೋಶಾಧಿಕಾರಿ ಅಖ್ತರ್ ಹುಸ್ನೈನ್ ಲೆಕ್ಕಪತ್ರವನ್ನು ಮಂಡಿಸಿದರು.
ಬಳಿಕ ಕ್ರಮವಾಗಿ ಶಂಸು ಗಾಂಜಾಲ್ ಮೀಡಿಯಾ ,ಅಲ್ತಾಫ್ ಅಲಿ ಸಿಸಿ, ಅಬೂಬಕ್ಕರ್ ಅಹ್ಸನಿ ರೈಂಬೋ, ಫಾರೂಕ್ ಅಮಾನಿ ಕ್ಯೂಡಿ ,ಸಂಶುದ್ದೀನ್ ಜೆ.ಪಿ ನಗರ ಪಬ್ಲಿಕೇಶನ್ , ಹೈದರ್ ಎಲೆಕ್ಟಾನಿಕ್ ಸಿಟಿ ದಅವಾ, , ಶಬೀಬ್ ಕ್ಯಾಂಪಸ್ , ಖಲೀಲ್ ವಿಸ್ಡಮ್ , ಜುನೈದ್ ಹಿಮಮಿ ಐಟಿ ವರದಿಯನ್ನು ವಾಚಿಸಿದರು.
ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಹೊಸ ಸಮಿತಿಯನ್ನು ಆರಿಸಲಾಯಿತು.
ನೂತನ ಅಧ್ಯಕ್ಷರಾಗಿ ಫಾರೂಕ್ ಅಮಾನಿ,ಕಾರ್ಯದರ್ಶಿಯಾಗಿ ಅಲ್ತಾಫ್ ಅಲಿ , ಕೋಶಾಧಿಕಾರಿಯಾಗಿ ಮುಸ್ತಾಕ್ ರವರನ್ನು ನೇಮಕಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಎಂ.ಎ ಕೋಶಾಧಿಕಾರಿ ಸತ್ತಾರ್ ಉಸ್ತಾದ್,ಎಸ್.ಜೆ.ಎಂ ಕಾರ್ಯದರ್ಶಿ
ತಾಜುದ್ದೀನ್ ಫಾಲಿಲಿ ,ಎಸ್.ವೈ.ಎಸ್ ರಾಜ್ಯ ನಾಯಕರಾದ ನಾಸಿರ್ ಕ್ಲಾಸಿಕ್ ,ಜಿಲ್ಲಾ ನಾಯಕರಾದ ಫಿರ್ದೌಸ್, ಸರ್ಶಾದ್ ಮತ್ತು ರಾಜ್ಯ ರೈಂನ್ಬೊ ಕಾರ್ಯದರ್ಶಿ ಶಿಹಾಬ್ ಮಡಿವಾಳ ಉಪಸ್ಥಿತರಿದ್ದರು .
