janadhvani

Kannada Online News Paper

ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್: ವಾರ್ಷಿಕ ಮಹಾಸಭೆ- ನೂತನ ಸಾರಥಿಗಳ ಆಯ್ಕೆ

ದಮ್ಮಾಮ್ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಮ್ ಝೋನ್ ಅಧೀನದ ಡಿಕೆಯಸ್ಸಿ ಯೂತ್ ವಿಂಗ್ ಜುಬೈಲ್ ಘಟಕದ ವಾರ್ಷಿಕ ಮಹಾಸಭೆ ದಿನಾಂಕ 06, ಫೆಬ್ರವರಿ 2025 ಗುರುವಾರ ಅಸ್ತ ಶುಕ್ರವಾರ ರಾತ್ರಿ 9 ಗಂಟೆಗೆ ಸರಿಯಾಗಿ ಡಿಕೆಯಸ್ಸಿ ಹಾಲ್ ಜುಬೈಲ್ ನಲ್ಲಿ ಜರಗಿತು.

ಯೂತ್ ವಿಂಗ್ ಅಧ್ಯಕ್ಷರಾದ ಸಫ್ವಾನ್ ಕಣ್ಣಂಗಾರ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಸಯ್ಯಿದ್ ಶಮೀರ್ ತಂಙಳ್ ಕೋಟೇಶ್ವರ ರವರು ದುಆ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು. ಸಫ್ವಾನ್ ಇರುವತ್ತೂರು ಪದವು ಖಿರಾಅತ್ ಪಠಿಸಿದರು. ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಗೌರವಾಧ್ಯಕ್ಷ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ಸಭೆಗೆ ಆಗಮಿಸಿದ ದಮ್ಮಾಮ್, ಅಲ್ ಖೋಬರ್, ತುಖ್ಬಾ ಹಾಗೂ ಜುಬೈಲ್ ನ ಡಿಕೆಯಸ್ಸಿ ಯ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫೀರ್ ಗೂಡಿನ ಬಳಿ ವಾರ್ಷಿಕ ವರದಿ, ಡಿಕೆಯಸ್ಸಿ ಗ್ಲೋಬಲ್ ವರದಿಯನ್ನು ರಿಯಾಝ್ ಪಡುಬಿದ್ರಿ, ಕೋಶಾಧಿಕಾರಿ ಸಾಮಿತ್ ಪಡುಬಿದ್ರಿ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.

ಅಧ್ಯಕ್ಷರಾದ ಮುಹಮ್ಮದ್ ಸಫ್ ವಾನ್ ಕಣ್ಣಂಗಾರ್ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ಅಧಿಕಾರದ ಅವಧಿಯಲ್ಲಿ ಡಿಕೆಯಸ್ಸಿ ಗಾಗಿ ನಮ್ಮೊಂದಿಗೆ ಸಹಕರಿಸಿ ಯಶಸ್ವಿಗೊಳಿಸಿದ ಸರ್ವರಿಗೂ ತಕ್ಕುದಾದ ಪ್ರತಿಫಲ ಅಲ್ಲಾಹು ಸುಬ್ಹಾನಹೂ ವತಆಲಾ ದ್ವಿಲೋಕಗಳೆರಡರಲ್ಲೂ ಅನುಗ್ರಹಿಸಲಿ ಆಮೀನ್ ಎಂದು ಪ್ರಾರ್ಥಿಸಿದರು.
2025 ನೇ ಸಾಲಿಗೆ ನೂತನ ಸಮಿತಿಯನ್ನು ಡಿಕೆಯಸ್ಸಿ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಮುಹಮ್ಮದ್ ರೋಯಲ್ ಮುಕ್ವೆ ಚುನಾವಣಾಧಿಕಾರಿಯಾಗಿ ನೂತನ ಸಮಿತಿ ರಚಿಸಲು ನೇತೃತ್ವ ವಹಿಸಿ ಈ ಕೆಳಗಿನ ಸದಸ್ಯರನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಸಾಮಿತ್ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಪಡುಬಿದ್ರಿ,ಹಣಕಾಸು ಕಾರ್ಯದರ್ಶಿಯಾಗಿ ನಿಶಾಯಿಲ್ ಕೂಳೂರು, ಜಂಟಿ ಹಣಕಾಸು ಕಾರ್ಯದರ್ಶಿಯಾಗಿ ಶಾಹಿಫ್ ಕೃಷ್ಣಾಪುರ, ಸಂವಹನ ಕಾರ್ಯದರ್ಶಿಯಾಗಿ ಸಫ್ವಾನ್ ಕನ್ನಂಗಾರ್ ಹಾಗೂ ಡೆವಲಪ್ಮೆಂಟ್ ಚೆಯರ್ಮ್ಯಾನ್ ಆಗಿ ಸಫೀರ್ ಗೂಡಿನಬಳಿ ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಅಬ್ದುಲ್ ಮಜೀದ್ ಬಾಹಸನಿ ಜಾರಿಗೆ ಜಾರಿಗೆಬೈಲ್, ಸಫ್ವಾನ್ ಇರುವತ್ತೂರು ಪದವು, ಹಾಗೂ ಮುಹಮ್ಮದ್ ಇರ್ಶಾದ್ ಕೃಷ್ಣಾಪುರ ಕಾರ್ಯದರ್ಶಿಗಳಾಗಿ ಮುಹಮ್ಮದ್ ಜುನೈದ್ ಕಾರ್ಕಳ, ಮುಹಮ್ಮದ್ ಶಾಹಿಖ್ ಮತ್ತು ಸಫ್ವಾನ್ ಮೂಳೂರು ರವರನ್ನು ನೇಮಿಸಲಾಯಿತು.

ಮುಖ್ಯ ಸಲಹೆಗಾರರಾಗಿ ಉಸ್ತಾದ್ ಪಿ.ಎಚ್. ಇಸ್ಮಾಯೀಲ್, ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಅಝರ್ ಪಡುಬಿದ್ರಿ ರವರನ್ನು ಆರಿಸಲಾಯಿತು ಮತ್ತು ಹತ್ತು ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ನೇಮಕ ಗೊಳಿಸಲಾಯಿತು.
ಅತಿಥಿಗಳಾಗಿ ಡಿಕೆಯಸ್ಸಿ ದಮ್ಮಾಮ್ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಡಿಕೆಯಸ್ಸಿ ವಿಶನ್ 30 ಚೆಯರ್ಮ್ಯಾನ್ ಹಾತಿಂ ಕೂಳೂರು, ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್ , ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ, ಕೇಂದ್ರ ಸಮಿತಿ ಸಂಘಟನಾ ಸದಸ್ಯ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ಫ್ಯಾಮಿಲಿ ಮುಲಾಖಾತ್ 2024 ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ಅಲ್ ಮುಝೈನ್ , ಅಲ್ ಖೋಬರ್ ಘಟಕದ ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಮಂಗಳೂರು, ದಮ್ಮಾಂ ವಲಯ ಮದದ್ ವಿಂಗ್ ಅಧ್ಯಕ್ಷ ಅಶ್ರಫ್ ಚಿಕ್ಕ ಮಗಳೂರು ಹಾಜರಿದ್ದು ಶುಭಾಷಂಸೆಗೈದರು.

ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸಾಮಿತ್ ಪಡುಬಿದ್ರಿ ಮಾತನಾಡುತ್ತಾ ತಾವುಗಳೆಲ್ಲರೂ ಇನ್ನು ಮುಂದಕ್ಕೂ ಹೆಚ್ಚಿನ ಮುತುವರ್ಜಿಯಿಂದ ಪ್ರವರ್ತನೆಗೈದು ಡಿಕೆಯಸ್ಸಿಯ ಅಭಿವೃದ್ಧಿಗೆ ನಮ್ಮೊಂದಿಗೆ ಕೈ ಜೋಡಿಸಬೇಕೆoದು ಭಿನ್ನವಿಸಿದರು.
ಸಭೆಯ ಕೊನೆಯಲ್ಲಿ ನೂತನ ಡೆವಲಪ್ ಮೆಂಟ್ ಚೆಯರ್ಮ್ಯಾನ್ ಸಫೀರ್ ಗೂಡಿನ ಬಳಿ ಧನ್ಯವಾದ ಗೈದರು.
ವರದಿ: ಇಸ್ಮಾಯೀಲ್ ಕಾಟಿಪಳ್ಳ
ಖಾದಿಂ, ಡಿಕೆಯಸ್ಸಿ.